September 23, 2026
Wednesday, September 23, 2026
spot_img

ಸಿಎಂ ಕೋಟೆಯಲ್ಲೇ ಮೊಳಗಿದ ಬರ ಪರಿಹಾರದ ಧ್ವನಿ: ಕನಕಪುರದಲ್ಲಿ ಕಮಲ ನಾಯಕರ ಬರ ವೀಕ್ಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ತೀವ್ರ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾದ್ಯಂತ ಬರ ಅಧ್ಯಯನಕ್ಕೆ ಚಾಲನೆ ನೀಡಿದೆ. ಇದರ ಭಾಗವಾಗಿ ಇಂದು ಮುಖ್ಯಮಂತ್ರಿಗಳ ಸ್ವಕ್ಷೇತ್ರವಾದ ಕನಕಪುರ ತಾಲೂಕಿನಲ್ಲಿ ಬಿಜೆಪಿ ನಿಯೋಗವು ಪರಿಶೀಲನೆ ನಡೆಸಿತು.

ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಕಮಲ ನಾಯಕರ ತಂಡವು ಕನಕಪುರ ತಾಲೂಕಿನ ಮಲ್ಲೇಗೌಡನದೊಡ್ಡಿ ಹಾಗೂ ಸಾಸಲಾಪುರ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿತು. ಈ ವೇಳೆ ನೀರಿಲ್ಲದೆ ಒಣಗುತ್ತಿರುವ ಬಾಳೆ ಮತ್ತು ಅಡಿಕೆ ತೋಟಗಳನ್ನು ವೀಕ್ಷಿಸಿದ ನಿಯೋಗ, ಸ್ಥಳೀಯ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ.

ಇದನ್ನೂ ಓದಿ:

ಬರ ಪರಿಹಾರಕ್ಕೆ ಬಿಜೆಪಿ ಒತ್ತಾಯ:

ಈ ಬರ ಪರಿಶೀಲನಾ ನಿಯೋಗದಲ್ಲಿ ಮಾಜಿ ಶಾಸಕ ಎನ್. ಮಹೇಶ್, ಶಾಸಕ ಶ್ರೀವತ್ಸ, ಎಂಎಲ್ಸಿಗಳಾದ ಗೋಪಿನಾಥ್ ರೆಡ್ಡಿ, ರಘುಕೌಟಿಲ್ಯ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಪರಿಶೀಲನೆ ಬಳಿಕ ಮಾತನಾಡಿದ ನಾಯಕರು, ರಾಜ್ಯ ಸರ್ಕಾರವು ಇನ್ನು ಮುಂದೆ ವಿಳಂಬ ಮಾಡದೆ ತಕ್ಷಣವೇ ಬರ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಮತ್ತು ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರಿಗೆ ತಕ್ಷಣವೇ ಸೂಕ್ತ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !