ಆನ್‌ಲೈನ್ ಗೇಮ್ ಆಡಿ 92 ಲಕ್ಷ ಕಳೆದ ಮಗ, ದಿಕ್ಕಾಪಾಲಾದ ಕುಟುಂಬ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸೀತಾರಾಮಪುರದ ಯುವಕನೊಬ್ಬ ಆನ್‌ಲೈನ್ ಗೇಮ್‌ನಲ್ಲಿ ಬರೋಬ್ಬರಿ 92 ಲಕ್ಷ ಹಣ ಕಳೆದುಕೊಂಡಿದ್ದಾನೆ

ಪದವಿ ವ್ಯಾಸಂಗ ಮಾಡುತ್ತಿದ್ದ ಹರ್ಷವರ್ಧನ್ ತಂದೆಯ ಹಣವನ್ನು ಕೆಸಿನೋ ಆಡಿ ಕಳೆದಿದ್ದಾನೆ. ತಂದೆಯ ಜಮೀನನ್ನು ಸರ್ಕಾರ ಖರೀದಿ ಮಾಡಿದ್ದು, ಆ ಹಣದಲ್ಲಿ ಬೇರೆಡೆ ಜಮೀನು ಖರೀದಿಸಲು ಮುಂದಾಗಿದ್ದರು. ಮುಂಗಡ ಹಣ ಪಾವತಿಸಿ ಉಳಿದ ಹಣವನ್ನು ಅಕೌಂಟ್‌ನಲ್ಲಿ ಇಟ್ಟುಕೊಂಡಿದ್ದರು.

ನಾನೆ ಹೊಸ ಜಮೀನಿಗೆ ಹಣ ನೀಡುತ್ತೇನೆ ಎಂದು ಹಣ ಪಡೆದು ಕೆಸಿನೋ ಆಡಿದ್ದಾನೆ. ತಂದೆ ಹಣ ಪೋಲು ಮಾಡಿದ್ದಲ್ಲದೆ ಏಳು ಲಕ್ಷ ರೂಪಾಯಿ ಸಾಲ ಕೂಡ ಮಾಡಿದ್ದಾನೆ.

ಮನೆಗೆ ಆಧಾರವಾಗಿದ್ದ ಜಮೀನು ಖರೀದಿಗೆ ಹಣ ಇಲ್ಲದೆ ಕುಟುಂಬ ಬೀದಿಗೆ ಬಿದ್ದಿದೆ. ಈ ಕುರಿತು ಸೈಬರ್ ಠಾಣೆಗೆ ದೂರು ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!