ಲ್ಯಾಪ್‌ಟಾಪ್ ಕದ್ದಿದ್ದಕ್ಕೆ ಕ್ಷಮಿಸಿ, ಅರ್ಜೆಂಟಾಗಿ ಹಣ ಬೇಕಿತ್ತು, ಕಳ್ಳ ಕಳಿಸಿದ ಇ-ಮೇಲ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳ್ಳನೊಬ್ಬ ಲ್ಯಾಪ್‌ಟಾಪ್ ಕದ್ದು, ಕದ್ದವರ ಇ-ಮೇಲ್ ಐಡಿ ಬಳಸಿ ಅವರಿಗೇ ಮೇಲ್ ಮಾಡಿದ್ದಾರೆ. ‘ಅಣ್ಣಾ ನನಗೆ ಜೀವನ ಸಾಗಿಸಲು ಹಣ ಬೇಕಿತ್ತು. ಹಾಗಾಗಿ ನಿಮ್ಮ ಲ್ಯಾಪ್‌ಟಾಪ್ ಕದ್ದಿದ್ದೇನೆ. ನೀವು ಸಂಶೋಧನಾ ಪ್ರಸ್ತಾವನೆಯಲ್ಲಿ ತೊಡಗಿದ್ದೀರ ಎಂದು ನನಗೆ ತಿಳಿಯಿತು. ಆ ಫೈಲ್‌ನ್ನು ಅಟ್ಯಾಚ್ ಮಾಡಿದ್ದೇನೆ. ಇನ್ನೂ ಯಾವುದಾದರೂ ಫೈಲ್ಸ್ ಬೇಕಿದ್ದರೆ ಬೇಗ ಮೇಲ್ ಮಾಡಿ ಕಳಿಸುತ್ತೇನೆ. ಬೇರೆಯವರಿಗೆ ಲ್ಯಾಪ್‌ಟಾಪ್ ಮಾರಾಟ ಮಾಡುತ್ತಿದ್ದೇನೆ, ಅವರಿಗೆ ಕೊಡುವುದರೊಳಗೆ ತಿಳಿಸಿ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದಿದ್ದಾರೆ.

ಗಾಡ್ ಗುಲುವಾ ಎನ್ನುವವರು ಟ್ವಿಟರ್‌ನಲ್ಲಿ ಮೇಲ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು, ಕಳ್ಳತನ ಆಗಿದ್ದಕ್ಕೆ ಕೋಪ, ಇತ್ತು. ಆದರೆ ಮೇಲ್ ನೋಡಿದಮೇಲೆ ಎಲ್ಲಾ ಭಾವನೆಗಳು ಕಲಸಿಹೋಗುತ್ತಿವೆ ಎಂದು ಹೇಳಿದ್ದಾರೆ.

ಶಿಕ್ಷಣದ ಮಹತ್ವ ಅರಿತಿರುವ ಕಳ್ಳ, ಬೇರೆಯವರ ರಿಸರ್ಚ್ ಪ್ರಪೋಸಲ್ ಬಗ್ಗೆಯೂ ಆಲೋಚಿಸಿದ್ದಾನೆ. ಕೆಲವರು ಇವನಿಗೆ ನಿಮ್ಮ ಲ್ಯಾಪ್‌ಟಾಪ್ ಗಿಫ್ಟ್ ಮಾಡಿ, ಕೆಲಸ ಕೊಡಿಸಿ, ಪಾಪ ಕಳ್ಳ ಎನ್ನುತ್ತಿದ್ದರೆ, ಇನ್ನ ಕೆಲವರು ಕಳ್ಳತನ ದಾರಿ ಅಲ್ಲ ಎನ್ನುತ್ತಿದ್ದಾರೆ.

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!