September 27, 2026
Sunday, September 27, 2026
spot_img

Soup | ಬೆಳ್ಳುಳ್ಳಿ ಕಬಾಬ್ ಅಲ್ಲ…ಇದು ಸೂಪ್! ಏನ್ ಟೇಸ್ಟಿಯಾಗಿದೆ ಗೊತ್ತಾ?

ಚಳಿಗಾಲವಾಗಲಿ ಅಥವಾ ದೇಹಕ್ಕೆ ಸ್ವಲ್ಪ ಆರಾಮ ಬೇಕಾದ ದಿನವಾಗಲಿ, ಬೆಳ್ಳುಳ್ಳಿ ಸೂಪ್ (Garlic Soup) ಅತ್ಯುತ್ತಮ ಆಯ್ಕೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿರುವ ಈ ಸೂಪ್ ಸುಲಭವಾಗಿ ತಯಾರಿಸಬಹುದು ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಬೇಕಾಗುವ ಪದಾರ್ಥಗಳು

ಬೆಳ್ಳುಳ್ಳಿ – 10 ರಿಂದ 12 ಕಾಯಿ (ಸಿಪ್ಪೆ ತೆಗೆದದ್ದು)
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿದ್ದು)
ಬೆಣ್ಣೆ ಅಥವಾ ಆಲಿವ್ ಆಯಿಲ್ – 1 ಟೇಬಲ್ ಸ್ಪೂನ್
ಮೆಣಸು ಪುಡಿ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ನೀರು ಅಥವಾ ತರಕಾರಿ ಸ್ಟಾಕ್ – 2 ಕಪ್
ಹಾಲು ಅಥವಾ ಫ್ರೆಶ್ ಕ್ರೀಮ್ – 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಬೆಣ್ಣೆ ಅಥವಾ ಆಲಿವ್ ಆಯಿಲ್ ಬಿಸಿ ಮಾಡಿ. ಅದಕ್ಕೆ ಬೆಳ್ಳುಳ್ಳಿ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಬೇಯಿಸಿ.
ಈಗ ನೀರು ಅಥವಾ ತರಕಾರಿ ಸ್ಟಾಕ್ ಸೇರಿಸಿ ಮಧ್ಯಮ ಉರಿಯಲ್ಲಿ 8–10 ನಿಮಿಷಗಳಷ್ಟು ಕುದಿಯಲು ಬಿಡಿ. ಮಿಶ್ರಣ ಸ್ವಲ್ಪ ತಣ್ಣಗಾದ ನಂತರ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿ ಮೃದುವಾದ ಪೇಸ್ಟ್ ಮಾಡಿಕೊಳ್ಳಿ.

ಆ ಪೇಸ್ಟ್ ಅನ್ನು ಮತ್ತೆ ಪಾತ್ರೆಗೆ ಹಾಕಿ, ಉಪ್ಪು ಹಾಗೂ ಮೆಣಸು ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಹಾಲು ಅಥವಾ ಕ್ರೀಮ್ ಸೇರಿಸಿ 2–3 ನಿಮಿಷ ಕುದಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ.

Must Read