ಆರ್‌ಆರ್‌ಆರ್‌ಗೆ ಮತ್ತೊಂದು ಮನ್ನಣೆ: ವಿಶ್ವವಿಖ್ಯಾತ ಚಲನಚಿತ್ರ ನಿಯತಕಾಲಿಕೆಯಲ್ಲಿ ಸಿನಿಮಾ ಕುರಿತು ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಮೌಳಿ ನಿರ್ದೇಶನದ ಚರಣ್ ಮತ್ತು ತಾರಕ್ ಅಭಿನಯದ ಮಲ್ಟಿ ಸ್ಟಾರರ್ ಟಾಲಿವುಡ್ ಚಿತ್ರ ಆರ್‌ಆರ್‌ಆರ್‌ ಭರ್ಜರಿ ಯಶಸ್ಸು ಕಂಡಿದೆ.  ಟಾಲಿವುಡ್‌ನಿಂದ ಹಾಲಿವುಡ್‌ಗೆ ದೇಶ-ವಿದೇಶಗಳಲ್ಲಿ ಆರ್‌ಆರ್‌ಆರ್ ಚಿತ್ರದ ಹೆಸರೇ ಕೇಳಿಬರುತ್ತಿದೆ.

ಆರ್‌ಆರ್‌ಆರ್‌ ಚಲನಚಿತ್ರವು ಹಾಲಿವುಡ್‌ನ ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಹಾಲಿವುಡ್ ಸ್ಯಾಟರ್ನ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೂಡಾ ಗೆದ್ದುಕೊಂಡಿತು. ಇದೀಗ ಆರ್‌ಆರ್‌ಆರ್‌ ಚಿತ್ರಕ್ಕೆ ಮತ್ತೊಂದು ಮನ್ನಣೆ ಸಿಕ್ಕಿದೆ.

ವಿಶ್ವಪ್ರಸಿದ್ಧ ಸಿನಿಮಾ ಮ್ಯಾಗಜಿನ್ ʻಎಂಪೈರ್ ಮ್ಯಾಗಜೀನ್ʼ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದೆ. ರಾಜಮೌಳಿ ಅವರನ್ನು ಸಂದರ್ಶಿಸಿ ತಮ್ಮ ಮ್ಯಾಗಜಿನ್ ನಲ್ಲಿ ಆರ್‌ಆರ್‌ಆರ್‌ ಬಗ್ಗೆ ವಿಶೇಷ ಲೇಖನ ಬರೆದಿದ್ದಾರೆ. ಎಂಪೈರ್ ಮ್ಯಾಗಜೀನ್ ಆರ್‌ಆರ್‌ಆರ್‌ ಚಿತ್ರ ಮತ್ತು ರಾಜಮೌಳಿ ನಿರ್ದೇಶನದ ಬಗ್ಗೆ ಉತ್ತಮ ವಿಮರ್ಶೆಯನ್ನು ಬರೆದಿದೆ. ಇಂತಹ ಪ್ರಸಿದ್ಧ ನಿಯತಕಾಲಿಕೆಯಲ್ಲಿ ನಮ್ಮ ಚಿತ್ರದ ಬಗ್ಗೆ ಬರೆಯುತ್ತಿರುವುದು ಸಂತಸ ತಂದಿದೆ ಎಂದು ರಾಜಮೌಳಿ ಹರ್ಷ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!