RECIPE| ಸ್ಪೆಷಲ್ ಕಜ್ಜಾಯ, ನೈವೇದ್ಯಕ್ಕೂ ಶ್ರೇಷ್ಟ-ಸವಿಯಲೂ ಬಲು ರುಚಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಣಪತಿ ಹಬ್ಬದ ಸ್ಪೆಷಲ್ ಕಜ್ಜಾಯವನ್ನು ಈ ರೀತಿ ಮಾಡಿ ನೋಡಿ..ಚೆನ್ನಾಗಿರುತ್ತವೆ. ರುಚಿ ರುಚಿಯಾದ ಕಜ್ಜಾಯ ಬಾಯಲ್ಲಿಟ್ಟರೆ ಕರಗೋ ಹಾಗಿರಬೇಕು. ಹಾಗಾದ್ರೆ ಮಾಡೋದೇಗೆ ನೋಡಿ.

ಬೇಕಾಗುವ ಸಾಮಾಗ್ರಿಗಳು: 1 ಕೊಬ್ಬರಿ, ಒಂದು ಕಪ್ ಹುಡಿ ಬೆಲ್ಲ , ಹತ್ತು ಗೋಡಂಬಿ, ಹತ್ತು ಒಣದ್ರಾಕ್ಷೆ , ಅರ್ಧಚಮಚ ಏಲಕ್ಕಿ ಪುಡಿ, ಒಂದು ಕಪ್ ಮೈದಾ, ಎರಡು ಚಮಚ ತುಪ್ಪ, ಅರ್ಧ ಕಪ್ ಬಿಸಿಹಾಲು.

ಮಾಡುವ ವಿಧಾನ:

ಒಂದು ದೊಡ್ಡ ಪಾತ್ರೆಗೆ ಕೊಬ್ಬರಿಯನ್ನು ತುರಿಮಾಡಿ ಹಾಕಿ, ಬೆಲ್ಲದ ಪುಡಿ, ಗೋಡಂಬಿಯನ್ನು ಚೂರು ಮಾಡಿ ಸೇರಿಸಿ. ಒಣದ್ರಾಕ್ಷಿ, ಏಲಕ್ಕಿ ಹುಡಿ ಹಾಕಿ ಮಿಶ್ರಮಾಡಿ. ಇನ್ನೊಂದು ಪ್ರತ್ಯೇಕ ಪಾತ್ರೆಗೆ ಮೈದಾ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ. ತುಪ್ಪ ಬಿಸಿ ಮಾಡಿ ಸೇರಿಸಿ. ಹಾಲು ಬಿಸಿಮಾಡಿ ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಂಡು ಶುಭ್ರವಾದ ಬಟ್ಟೆಯಲ್ಲಿ ಅರ್ಧಗಂಟೆ ಸುತ್ತಿಡಿ. ನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಪೂರಿಯಾಕಾರದಲ್ಲಿ ತಟ್ಟಿಟ್ಟುಕೊಳ್ಳಿ. ಅದರ ಮಧ್ಯಭಾಗಕ್ಕೆ ಕೊಬ್ಬರಿ ತುರಿಯ ಮಿಶ್ರಣವನ್ನು ಹಾಕಿ ಮಡಚಿ ತುದಿಯನ್ನು ಗಟ್ಟಿಯಾಗಿ ಸೇರಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಹುರಿಯಿರಿ. ಬಿಸಿ ಬಿಸಿ ಕಜ್ಜಾಯ ರುಚಿಯಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!