t-20: ಮಿಂಚಿದ ಚಾಹಲ್‌- ಹೂಡಾ; ಐರ್ಲೆಂಡ್‌ ವಿರುದ್ಧ ಗೆದ್ದು ಬೀಗಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಭಾನುವಾರ ಡಬ್ಲಿನ್‌ ನಲ್ಲಿ ನಡೆದ ಮೊದಲ ಟಿ 20 ನಲ್ಲಿ ಭಾರತವು ಐರ್ಲೆಂಡ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿದೆ.
ಭಾರತ ತಂಡದ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡರು. ಮಳೆಯಿಂದಾಗಿ 12 ಓವರ್‌ ಗಳಿಗೆ  ಸೀಮಿತಗೊಂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 4 ವಿಕೆಟ್ ನಷ್ಟಕ್ಕೆ 108 ಬಾರಿಸಿತು. ತಂಡದ ಪರ ಹ್ಯಾರಿ ಟೆಕ್ಟರ್ ಕೇವಲ 33 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 64 ರನ್ ಗಳಿಸಿ ಐರ್ಲೆಂಡ್‌ ಮೊತ್ತವನ್ನು 100 ರನ್‌ಗಳ ಗಡಿ ದಾಟಿಸಿದರು.
109 ರನ್‍ಗಳ ಗುರಿ ಬೆನ್ನಟ್ಟಿದ ಭಾರತ 9.2 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ ಇನ್ನೂ 16 ಎಸೆತ ಬಾಕಿ ಇರುವಂತೆ 7 ವಿಕೆಟ್‍ಗಳ ಅಂತರದ ಜಯ ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಅಚ್ಚರಿಯೆಂಬಂತೆ ಓಪನರ್‌ ಸ್ಥಾನದಲ್ಲಿ ಕಣಕ್ಕಿಳಿದ ದೀಪಕ್ ಹೂಡಾ ಅವರ 29 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿ ಆಭರತಕ್ಕೆ ಗೆಲುವಿನ ಕಾಣಿಕೆ ನೀಡಿದರು. ಮತ್ತೊರ್ವ ಆರಂಭಿಕ ಇಶಾನ್ ಕಿಶನ್ (11 ಎಸೆತಗಳಲ್ಲಿ 26 ರನ್) ಮತ್ತು ಹಾರ್ದಿಕ್ ಪಾಂಡ್ಯ (12 ಎಸೆತಗಳಲ್ಲಿ 24‌ ರನ್) ಸಹ ಉಪಯುಕ್ತ ಕೊಡುಗೆಗಳನ್ನು ನೀಡಿದರು. ಭಾರತದ ಪರ ಭುವನೇಶ್ವರ್ ಕುಮಾರ್ (3 ಓವರ್‌ಗಳಲ್ಲಿ 1/16) ಮತ್ತು ಯುಜುವೇಂದ್ರ ಚಾಹಲ್ (3 ಓವರ್‌ಗಳಲ್ಲಿ 1/11) ಅತ್ಯುತ್ತಮ ದಾಳಿ ಸಂಘಟಿಸಿದರು.

ಸಂಕ್ಷಿಪ್ತ ಸ್ಕೋರ್:
ಐರ್ಲೆಂಡ್: 12 ಓವರ್‌ಗಳಲ್ಲಿ 4 ವಿಕೆಟ್‌ಗೆ 108 (ಹ್ಯಾರಿ ಟೆಕ್ಟರ್ ಔಟಾಗದೆ 64; ಭುವನೇಶ್ವರ್ ಕುಮಾರ್ 1/16, ಯುಜುವೇಂದ್ರ ಚಾಹಲ್ 1/11).

ಭಾರತ: 9.2 ಓವರ್‌ಗಳಲ್ಲಿ 3 ವಿಕೆಟ್‌ಗೆ 111 (ದೀಪಕ್ ಹೂಡಾ ಔಟಾಗದೆ 47; ಕ್ರೇಗ್ ಯಂಗ್ 2/18).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!