ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೀನಾಳನ್ನು ಕೊಂದಿದ್ದ ಆರೋಪಿ ಪ್ರಕಾಶ್ ಕಡೆಗೂ ಸಿಕ್ಕಿಬಿದ್ದಿದ್ದಾನೆ.
ಮೀನಾ ಹಾಗೂ ಪ್ರಕಾಶ್ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಪ್ರಕಾಶ್ ಒತ್ತಾಯದ ಮೇರೆಗೆ ಮೀನಾ ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡಿದ್ದರು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ದಿನ ಮೀನಾ ಪಾಸ್ ಆಗಿದ್ದೇನೆ ಎಂದು ಖುಷಿಯಿಂದ ಎಲ್ಲರ ಬಳಿ ಹೇಳಿಕೊಂಡಿದ್ದಳು.
ಆಕೆ ಕೊಲೆಯಾಗುವ ದಿನವೇ ಪ್ರಕಾಶ್ ಜೊತೆ ನಿಶ್ಚಿತಾರ್ಥ ಮಾಡಲಾಗಿತ್ತು. ಸಂಜೆ ವೇಳೆಗೆ ಪ್ರಕಾಶ್ ಮೀನಾ ಮನೆಯ ಬಳಿ ಬಂದು ಗಲಾಟೆ ಮಾಡಿದ್ದಾನೆ ಆಕೆಯನ್ನು ಎಳೆದೊಯ್ತು ರುಂಡ ಮುಂಡ ಬೇರೆಯಾಗುವಂತೆ ಕಡಿದಿದ್ದಾನೆ.
ನಂತರ ಕಾಡಿನ ಬಳಿ ಓಡಿಹೋಗಿದ್ದು, ಒಂದು ದಿನ ಕಾಡಿನಲ್ಲೇ ಸಮಯ ಕಳೆದಿದ್ದಾನೆ. ಪೊಲೀಸರು ಆತನನ್ನು ಕಾಡಿನಲ್ಲಿಯೇ ಬಂಧಿಸಿದ್ದು, ಠಾಣೆಗೆ ಕರೆತಂದಿದ್ದಾರೆ. ಆಕೆಯನ್ನು ಯಾಕೆ ಕೊಂದ? ಆಕೆಯ ರುಂಡ ಎಲ್ಲಿದೆ ಎಂದು ಈವರೆಗೂ ಪ್ರಕಾಶ್ ಹೇಳಿಲ್ಲ.
ಎಸ್‌ಎಸ್‌ಎಲ್‌ಸಿ ಪಾಸ್ ಆದ ವಿದ್ಯಾರ್ಥಿಯ ರುಂಡ ಕತ್ತರಿಸಿದ ಪ್ರಕರಣ ಕೇಳಿ ಇಡೀ ಕೊಡಗೇ ಬೆಚ್ಚಿಬಿದ್ದಿತ್ತು. 16 ವರ್ಷದ ಬಾಲಕಿಯನ್ನು 34 ವರ್ಷದ ಕೊಲೆಗಾರ ಕೊಂದಿದ್ದನು. ಅಪ್ರಾಪ್ತೆಯನ್ನು ಹಗಲು ನಿಶ್ಚಿತಾರ್ಥ ಮಾಡಿಕೊಂಡು ಸಂಜೆ ವೇಳೆ ಆಕೆಗೆ ಕತ್ತಿಯಿಂದ ಕಡಿದು ರುಂಡ-ಮುಂಡ ಬೇರ್ಪಡಿಸಿದ್ದನು. ಬಳಿಕ ಕಾಡಿನತ್ತ ತಲೆ ಹಿಡಿದುಕೊಂಡು ಪರಾರಿಯಾಗಿದ್ದನು. ಆದರೀಗ ಪರಾರಿಯಾದ ಕೊಲೆಗಾರ ಸಿಕ್ಕಿದ್ದಾನೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.