ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀಟ್ ಪರೀಕ್ಷೆಗೆ ತಡವಾಗಿ ಬಂದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡದ್ದಕ್ಕೆ ಪರೀಕ್ಷಾ ಕೇಂದ್ರದ ಗೇಟ್ ಮುಂದೆ ವಿದ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕಿದ ಘಟನೆ ನಡೆದಿದೆ.
ಬೆಂಗಳೂರಿನ ಯಲಹಂಕದ ಪ್ರಥಮ ದರ್ಜೆ ಕಾಲೇಜಿನಲ್ಲಿ ನೀಟ್ ಪರೀಕ್ಷೆ ಬರಲು 10 ನಿಮಿಷ ತಡವಾಗಿ ವಿದ್ಯಾರ್ಥಿನಿ ಆಗಮಿಸಿದ್ದಾಳೆ. ಆದರೆ ಸಿಬ್ಬಂದಿಗಳು ತಡವಾಗಿದೆ ಎಂದು ಪರೀಕ್ಷೆ ಬರೆಯಲು ನಿರಾಕರಿಸಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ನೀಟ್ ಎಕ್ಸಾಮ್ ಆರಂಭವಾಗಿದ್ದು, ಮಧ್ಯಾಹ್ನ 1:30ರ ವರೆಗೆ ಎಕ್ಸಾಮ್ ಸೆಂಟರ್ ಗೇಟ್ ಓಪನ್ ಆಗಿತ್ತು. ಆದರೆ ಟ್ರಾಫಿಕ್ ಜಾಮ್ ನಿಂದ ಯುವತಿ ಕೆಲ ನಿಮಿಷಗಳ ಕಾಲ ತಡವಾಗಿ ಬಂದಿದ್ದಾಳೆ. ಈ ವೇಳೆ ಸಿಬ್ಬಂದಿಗಳು ಗೇಟ್ ಕ್ಲೋಸ್ ಆಗಿದೆ ಎಂದು ಹೇಳಿ ಪ್ರವೇಶ ನಿರಾಕರಿಸಿದ್ದಾರೆ. ಇದರಿಂದ ಬೇಸರಗೊಂಡು ವಿದ್ಯಾರ್ಥಿನಿ ಪರೀಕ್ಷೆ ಬರೆಯದೆ ಕಣ್ಣೀರು ಹಾಕಿದ್ದಾಳೆ.ಇದೇ ರೀತಿಯಾಗಿ ನಗರದ ಚಾಲುಕ್ಯ ಸರ್ಕಲ್ ಬಳಿಯ ಆರ್ಸಿ ಕಾಲೇಜಿನಲ್ಲೂ ಘಟನೆ ನಡೆದಿದೆ.



