‘ದಳಪತಿ’ ವಿಜಯ್​ ನಟನೆಯ 67ನೇ ಚಿತ್ರದ ಶೀರ್ಷಿಕೆ ಇಂದು ಅನಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾಲಿವುಡ್‌ ನಟ ದಳಪತಿ ವಿಜಯ್‌ ನಟನೆಯ 67ನೇ ಸಿನೆಮಾದ ಶೀರ್ಷಿಕೆ ಇಂದು ಸಂಜೆ ಅನಾವರಣಗೊಳ್ಳಲಿದೆ ಎಂದು ರಗಡ್‌ ಪೋಸ್ಟರ್‌ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದ ಘಳಿಗೆ ಕೊನೆಗೂ ಸಮೀಪಿಸಿದೆ.

ಈ ಸಿನಿಮಾಗೆ ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾವನ್ನು ‘ದಳಪತಿ 67’ (Thalapathy 67) ಎಂದು ಕರೆಯಲಾಗುತ್ತಿದೆ. ಈಗ ಈ ಚಿತ್ರದ ಶೀರ್ಷಿಕೆ ಅನೌನ್ಸ್​ ಮಾಡುವ ಕ್ಷಣ ಹತ್ತಿರವಾಗಿದ್ದು, ಇಂದು (ಫೆ.3) ಸಂಜೆ 5 ಗಂಟೆಗೆ ಟೈಟಲ್​​ ಅನಾವರಣಗೊಳ್ಳಲಿದೆ.

‘ದಳಪತಿ 67’ ಸಿನಿಮಾದಲ್ಲಿ ವಿಜಯ್​ಗೆ ಜೋಡಿಯಾಗಿ ತ್ರಿಷಾ ಕೃಷ್ಣನ್​ ನಟಿಸಲಿದ್ದಾರೆ. ಫೆಬ್ರವರಿ 1ರಂದು ಈ ಸಿನಿಮಾಗೆ ಮುಹೂರ್ತ ನೆರವೇರಿತ್ತು. ಈ ವೇಳೆ ಚಿತ್ರತಂಡದ ಹಲವರು ಭಾಗಿಯಾಗಿದ್ದರು. ಈ ಸಿನಿಮಾದಲ್ಲಿ ವಿಜಯ್​ ಮತ್ತು ತ್ರಿಷಾ ಜೊತೆ ಸಂಜಯ್​ ದತ್​, ಗೌತಮ್​ ವಾಸುದೇವ ಮೆನನ್​, ಮಿಸ್ಕಿನ್​, ಮನ್ಸೂರ್​ ಅಲಿ ಖಾನ್​, ಪ್ರಿಯಾ ಆನಂದ್​ ಮುಂತಾದವರು ನಟಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!