May 29, 2026
Friday, May 29, 2026
spot_img

ಕರಣ್ ಇನ್‌ಸ್ಟಾಗ್ರಾಮ್‌ನಿಂದ ಸ್ಟಾರ್ ನಟ-ನಟಿಯರು ಔಟ್! ‘ಡಿಜಿಟಲ್ ಡಿಟಾಕ್ಸ್’ ಎಂದಿದ್ದೇಕೆ ಖ್ಯಾತ ನಿರ್ದೇಶಕ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖ್ಯಾತ ಚಿತ್ರನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರು ಚಿತ್ರರಂಗದ ತಾರೆಯರೊಂದಿಗೆ ಹೊಂದಿರುವ ಆಪ್ತ ಬಾಂಧವ್ಯಕ್ಕೆ ಹೆಸರುವಾಸಿ. ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಕರಣ್, ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ದಿಢೀರ್ ಬದಲಾವಣೆ ಇಡೀ ಹಿಂದಿ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸ್ಟಾರ್ ನಟ-ನಟಿಯರ ಅನ್‌ಫಾಲೋ ಮಾಡಿದ ಕರಣ್

ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಮ್ ಫಾಲೋಯಿಂಗ್ ಲಿಸ್ಟ್‌ನಿಂದ ಶಾರುಖ್ ಖಾನ್, ಕರೀನಾ ಕಪೂರ್, ಆಲಿಯಾ ಭಟ್, ಅನನ್ಯಾ ಪಾಂಡೆ, ಕಾರ್ತಿಕ್ ಆರ್ಯನ್, ವರುಣ್ ಧವನ್, ಸಿದ್ದಾರ್ಥ್ ಮಲ್ಹೋತ್ರಾ, ಮಲೈಕಾ ಅರೋರಾ ಮತ್ತು ಪ್ರಸಿದ್ಧ ಡಿಸೈನರ್ ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವು ಆಪ್ತ ತಾರೆಯರನ್ನು ಅನ್‌ಫಾಲೋ ಮಾಡಿದ್ದಾರೆ. ಪ್ರಸ್ತುತ ಅವರು ಕೇವಲ 78 ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದ್ದು, ಇವುಗಳಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರ ಖಾತೆ ಇನ್ನು ಉಳಿದುಕೊಂಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಈ ದಿಢೀರ್ ನಡೆ ಬಾಲಿವುಡ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮೂಡಿದೆಯೇ ಎಂಬ ವದಂತಿಗಳಿಗೆ ಕಾರಣವಾಗಿತ್ತು.

‘ಡಿಜಿಟಲ್ ಡಿಟಾಕ್ಸ್’ ಎಂದ ನಿರ್ದೇಶಕ

ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡುತ್ತಿದ್ದಂತೆ ಎಚ್ಚೆತ್ತ ಕರಣ್ ಜೋಹರ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ನೇರ ಸ್ಪಷ್ಟನೆ ನೀಡಿದ್ದಾರೆ.

“ಇದು ಕೇವಲ ಡಿಜಿಟಲ್ ಡಿಟಾಕ್ಸ್! ಇನ್‌ಸ್ಟಾಗ್ರಾಮ್‌ನಲ್ಲಿ ನಾನು ಕಳೆಯುವ ಸಮಯ ಮತ್ತು ಶಕ್ತಿಯನ್ನು ಕಡಿಮೆ ಮಾಡಲು ಎಲ್ಲರನ್ನೂ ಅನ್‌ಫಾಲೋ ಮಾಡುತ್ತಿದ್ದೇನೆ. ಇದನ್ನು ರಾಷ್ಟ್ರೀಯ ಸುದ್ದಿ ಮಾಡಬೇಡಿ. ದಯವಿಟ್ಟು ಕ್ಲಿಕ್‌ಬೈಟ್‌ಗಾಗಿ ಬೇರೆ ವಿಷಯ ಹುಡುಕಿ, ಇದು ತೀರಾ ಅಪ್ರಸ್ತುತವಾದ ವಿಷಯ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಕಾರಣಗಳಿಗಾಗಿ ಕರಣ್ ಈ ನಿರ್ಧಾರ ಕೈಗೊಂಡಿದ್ದು, ಚಿತ್ರರಂಗದ ಸ್ನೇಹಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !