Friday, June 2, 2023

Latest Posts

ರಾಜ್ಯ ಚುನಾವಣೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಂಪತಿ ಮತದಾನ

ಹೊಸದಿಗಂತ ವರದಿ, ಕಲಬುರಗಿ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡುವಾಗ ಪಕ್ಕದಲ್ಲೆ ನಿಂತಿದ್ದ ಪತ್ನಿ ರಾಧಾಬಾಯಿ ಅವರನ್ನು ತಾವು ಮತದಾನ ಮಾಡುವಾಗ ದೂರ ಸರಿಸಿ ಮತ ಚಲಾಯಿಸಿದ್ದಾರೆ.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಸವನಗರದ ಮತಗಟ್ಟೆ ಸಂಖ್ಯೆ 120 ರಲ್ಲಿ ಮತ ಚಲಾಯಿಸಲು ಪತ್ನಿ ರಾಧಾಬಾಯಿ ಅವರೊಂದಿಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಮತದಾನ ಮಾಡುವಾಗ ಪಕ್ಕದಲ್ಲೇ ನಿಂತಿದ ರಾಧಾಬಾಯಿರನ್ನ ಕೈಸನ್ನೆ ಮೂಲಕ ದೂರ ಸರಿ ಅಂತಾ ಹೇಳಿ, ನಂತರ ಮತ ಚಲಾಯಿಸಿದ್ದಾರೆ.

ಯಾರೇ ಆಗಲಿ ಮತದಾನ ಮಾಡುವುದು ವಿಕ್ಷೀಸಬಾರದೆಂದು ಪತ್ನಿಯನ್ನು ದೂರ ಸರಿಸಿ ಖರ್ಗೆ ಮತಚಲಾಯಿಸಿದ್ದಾರೆ.

ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಅವರು, ಎಸ್ ಸಿ, ಎಸ್ ಟಿ ಮೀಸಲಾತಿ ಖರ್ಗೆ ಸುಳ್ಳು ಹೇಳತ್ತಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಪ್ರತಿಕ್ರಿಯಿಸಿ, ಮೀಸಲಾತಿ ವಿಚಾರ ಕೋರ್ಟ್ ನಲ್ಲಿ ಇದೆ ಎಂದು ಹೇಳತ್ತಾರೆ.ಆದರೆ, ಮೀಸಲಾತಿ ಕೊಟ್ಟಿದರೆ ದಿನಾಂಕ ಯಾಕೆ ಮುಂದೆ ಹಾಕಿದರು. ಪದೇ ಪದೇ ಮುಂದೆ ಹಾಕಲು ಕಾರಣ ಏನು ಅನ್ನೋದನ್ನು ಅವರು ಹೇಳಲಿ. ಅವರು ಅಧಿಕಾರದಲ್ಲಿ ಇದ್ದಾಗಲೇ ಜಾರಿಗೆ ತರಬೇಕಿತ್ತು. ಆದರೆ, ಅವರು ಯಾಕೆ ಜಾರಿಗೆ ತಂದಿಲ್ಲ. ಇದೆಲ್ಲ ಸುಮ್ನೆ ಚುನಾವಣೆ ಬಂದಿದೆ ಎಂದು ಹೀಗೆ ಮಾಡತ್ತಿದ್ದಾರೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!