Saturday, January 28, 2023

Latest Posts

ರಾಜ್ಯಮಟ್ಟದ ಹಿಂದೂಸ್ಥಾನಿ ಗಾಯನ ಸ್ಪರ್ಧೆ: ಆಮೋದಿನಿ ವಾಸುದೇವ ಮಹಾಲೆ ತೃತೀಯ ಸ್ಥಾನ

ಹೊಸದಿಗಂತ, ವರದಿ, ಹುಬ್ಬಳ್ಳಿ:

ರಾಜ್ಯ ಸರ್ಕಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಯುವಜನೋತ್ಸವದ ಹಿಂದೂಸ್ಥಾನಿ ಗಾಯನ ಸ್ಪರ್ಧೆಯಲ್ಲಿ ನಗರದ ಆಮೋದಿನಿ ವಾಸುದೇವ ಮಹಾಲೆ ತೃತೀಯ ಸ್ಥಾನ ಪಡೆದು ಧಾರವಾಡದ ಕೀರ್ತಿ ಹೆಚ್ಚಿಸಿದ್ದಾರೆ.
ಇತ್ತೀಚೆಗೆ ಚಿಕ್ಕಮಂಗಳೂರಿನಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ನಡೆದಿತ್ತು. ಹಿಂದೂಸ್ಥಾನಿ ಸಂಗೀತ ಸ್ಪರ್ಧೆಯಲ್ಲಿ ೩೨ ಜಿಲ್ಲೆಯ ಸ್ಪರ್ಧಾಳಿಗಳು ಭಾಗವಹಿಸಿದ್ದು, ಆಮೋದಿನಿ ೩ ನೇ ಸ್ಥಾನ ಪಡೆದಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಚಿಕ್ಕಮಂಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಉಮಾ ಪ್ರಶಾಂತ ಹಾಗೂ ಉಪವಿಭಾಗಾಕಾರಿ ಹೆಚ್.ಡಿ. ರಾಜೇಶ ಅವರು ೫ ಸಾವಿರ ರೂ. ನಗದು, ಟ್ರೋಫಿ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದ ಎಂಕಾಂ ಮೊದಲನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಪ್ರಸ್ತುತ ಪಂ. ಅಶೋಕ್ ನಾಡಿಗೇರ್ ಹತ್ತಿರ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!