Sunday, August 14, 2022

Latest Posts

ರಾಜ್ಯಕ್ಕೆ ಯೋಗಿ ಮಾದರಿ ಸರ್ಕಾರ ಬೇಕು, ಕೋಮುವಾದಿಗಳನ್ನು ಎನ್ಕೌಂಟರ್‌ ಮಾಡಿ: ಭಾಂಡಗೆ ಆಗ್ರಹ

ಹೊಸದಿಗಂತ ವರದಿ, ಬಾಗಲಕೋಟೆ
ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ನಿರಂತರವಾಗಿ ನಡೆಯುತ್ತಿದ್ದರೂ ಕಠಿಣ ಕ್ರಮದ ಬದಲಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ರೀತಿ ಬೋಲ್ಡಜರ್ ಆಡಳಿತ ಹಾಗೂ ಹತ್ಯೆಕೋರರನ್ನು ಎನ್ ಕೌಂಟರ್ ಮಾಡಿದರೆ ಹಿಂಸಾಕೃತ್ಯ ಮಾಡುವ ಕೋಮುವಾದಿಗಳಿಗೆ ಹಾಗೂ ಭಯೋತ್ಪಾದಕರಿಗೆ ನಡುಕ ಹುಟ್ಟುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ನಗರದಲ್ಲಿ ಬುಧುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ‌ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸರ್ಕಾರ ಇದ್ದರೂ ಹಿಂದೂಗಳಿಗೆ ರಕ್ಷೇ ಇಲ್ಲದಂತಾಗಿದೆ ಎಂದು ನೋವು ವ್ಯಕ್ತಪಡಿಸಿದರು.
ಇತ್ತೀಚಿಗೆ ಹರ್ಷನ ಕೊಲೆಯಾದಾಗಲೂ ಕೂಡ ಕಠಿಣ ಕ್ರಮ‌ಕೈಗೊಳ್ಳುತ್ತೇವೆ ಎಂದರೂ ಏನೂ ಆಗಲಿಲ್ಲ.‌ಈಗ ಪ್ರವೀಣನ ಹತ್ಯೆಯಾಯಿತು ಆದರೂ ಕಠಿಣ ಕ್ರಮ‌ಕೈಗೊಳ್ಳುತ್ತೇವೆ ಎಂದು ಸರ್ಕಾರದವರು ಹೇಳುತ್ತಾರೆ . ಕಠಿಣ ಕ್ರಮದ ಬದಲಾಗಿಹಾಗೂ ಗೂಂಡಾಗಿರಿ, ಹತ್ಯೆಕೋರರನ್ನು ಮುಲಾಜಿಲ್ಲದೇ ಎನ್ ಕೌಂಟರ ಮಾಡಬೇಕು ಎಂದು ಆಕ್ರೋಶಭರಿತವಾಗಿ ಹೇಳಿದರು.
ಹಿಂದೂತ್ವ ಹಾಗೂ ರಾಷ್ಟ್ರೀಯ ಪಕ್ಷವಾಗಿರಲು ಬಿಜೆಪಿ ಪಕ್ಷವನ್ನು ಕಟ್ಟಲಾಗಿದೆ. ಬಿಜೆಪಿಯನ್ನು ಅಧಿಕಾರ್ಕೇರಲು ಮಾತ್ರ ಪಕ್ಷ ಕಟ್ಟಿಲ್ಲ, ಈಗ ನಡೆಯುತ್ತಿರುವ ಬೆಳವಣಿಗೆ ನೋಡಿ ಬಿಜೆಪಿ ಕಾರ್ಯಕರ್ತರು ಬೇಜಾರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ‌ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಧಾನಿ, ರಾಷ್ಟ್ರಪತಿ, ಹಲವು ಮಂತ್ರಿಗಳು ಆರ್ ಎಸ್ ಎಸ್ ದಿಂದ‌ಬಂದಿದ್ದಾರೆ‌.ನಮ್ಮನಾಯಕರೇ ಹೇಳುತ್ತಾರೆ. ನಮ್ಮ ಬಿಜೆಪಿ ಪಕ್ಷ ಹಿಂದೂತ್ವದ ಪಕ್ಷವಾಗಿದೆ. ನಾವೆಲ್ಲ ಹಿಂದೂತ್ವದಿಂದ‌ ಬಂದಿದ್ದೇವೆ. ಹೀಗಾಗಿ ಕೋಟ್ಯಾಂತರ ಬಿಜೆಪಿ ಕಾರ್ಯಕರ್ತರು ನಮ್ಮನ್ನು ಬೆನ್ನು ಹತ್ತಿದ್ದಾರೆ.ಇವತ್ತು ಅವರಿಗೆ ರಕ್ಷಣೆ ಇಲ್ಲ. ಕಾರ್ಯಕರ್ತರ ಕೊಲೆಯಾಗುತ್ತಿದೆ. ಸರ್ಕಾರ ತಕ್ಷಣ ಕೊಲೆಗಡುಕರ ಹೆಡೆಮುರಿ ಕಟ್ಟಬೇಕು. ಪ್ರತಿಯೊಬ್ಬರೂ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss