ರಾಜ್ಯದ SSLC ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ ಆತಂಕ ರಾಜ್ಯದಲ್ಲಿ ಹೆಚ್ಚುತ್ತಿದ್ದು , ಇತ್ತ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು SSLC ಪರೀಕ್ಷೆಯನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.
ಒಂದು ವೇಳೆ ಪರೀಕ್ಷಾ ವೇಳಾಪಟ್ಟಿ ಕುರಿತು ಆಕ್ಷೇಪಣೆಗಳಿದ್ದರೆ ಅಭ್ಯರ್ಥಿಗಳು/ಪೋಷಕರು ಅರ್ಜಿ ಸಲ್ಲಿಸಲು ಜನವರಿ 6-14 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಮಂಡಳಿಯ ಅಂತರ್ಜಾಲ www.sslc.karnataka.gov.in ಅಥವಾ [email protected] ಇ-ಮೇಲ್ ಮೂಲಕ ಅಥವಾ ನಿರ್ದೇಶಕರು(ಪರೀಕ್ಷೆಗಳು)ಗೆ ಸಲ್ಲಿಸಬಹುದಾಗಿದೆ.
ಇನ್ನು ಪರೀಕ್ಷಾ ಸಮಯಯು ಬೆಳಗ್ಗೆ 10:30 – ಮಧ್ಯಾಹ್ನ 1:45 ರ ವರೆಗೆ ನಡೆಯಲಿದ್ದು, ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳನ್ನು ನೀಡಲಾಗುತ್ತದೆ.

ವೇಳಾಪಟ್ಟಿ ಹೀಗಿದೆ:
28-3-2022- ಪ್ರಥಮ ಭಾಷೆ,
30-3-2022- ದ್ವಿತೀಯ ಭಾಷೆ
1-4-2022- ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್
4-4-2022- ಗಣಿತ, ಸಮಾಜಶಾಸ್ತ್ರ
6-4-2022- ಸಮಾಜ ವಿಜ್ಞಾನ
8-4-2022- ತೃತೀಯ ಭಾಷೆ
11-4-2022- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!