ರಾಜ್ಯಪಾಲರ ವಿರುದ್ಧ ಹೇಳಿಕೆ: ಕ್ರಮಕ್ಕೆ ಒತ್ತಾಯಿಸಿ ಬಿಜೆಪಿಯಿಂದ ದೂರು

ಹೊಸದಿಗಂತ ವರದಿ, ಮಂಡ್ಯ :

ಬಾಂಗ್ಲಾ ಪ್ರಧಾನಿ ಗತಿಯೇ ರಾಜ್ಯಪಾಲರಿಗೂ ಬರಲಿದೆ. ಎಂಬ ಹೇಳಿಕೆ ನೀಡಿರುವ ಶಾಸಕ ಐವನ್ ಡಿಸೋಜಾ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಲ್ಲಿ ರಾಜ್ಯಪಾಲರೇ ಕಾರಣ ಎಂಬ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ, ಯುವ ಮೋರ್ಚಾ ಕಾರ್ಯಕರ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದರು.

ಕಾಂಗ್ರೆಸ್‌ನ ಹತಾಶ ಮನಸ್ಥಿತಿಗಳು ಹೇಗೆಲ್ಲ ಕಾರ್ಯಾಚರಿಸುತ್ತವೆ ಎಂಬುದನ್ನು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಬಿಚ್ಚಿಟ್ಟಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಬಾಂಗ್ಲಾದೇಶದ ಮಾದರಿಯಲ್ಲಿ ಕೆಳಗಿಳಿಸುತ್ತೇವೆ ಎಂಬ ಹೇಳಿಕೆಯ ಹಿಂದಿನ ಮರ್ಮವೇನು? ಹತಾಶಮನೋಭಾವದಿಂದ ಕಾಂಗ್ರೆಸ್ ಪಕ್ಷ ಏನಾದರೂ ರಾಷ್ಟ್ರದಲ್ಲಿ ಆಂತರಿಕ ಕಲಹ ಉಂಟುಮಾಡುವಂತಹ ಸಂಚುರೂಪಿಸಿದೆ ಎಂಬ ಅನುಮಾನ ಕಾಡುತ್ತಿದೆ. ಹೀಗಾಗಿ ಬಾಂಗ್ಲಾ ಮಾದರಿ ದಾಳಿ ನಡೆಸುವ ಹೇಳಿಕೆ ನೀಡಿರುವ ಶಾಸಕ ಐವನ್ ಡಿಸೋಜಾ ರವರನ್ನು ವಿಚಾರಣೆಗೆ ಒಳಪಡಿಸಿ. ಕಾಂಗ್ರೆಸ್ ಪಕ್ಷದ ಪಿತೂರಿ ಏನಂಬುದನ್ನು ಅರಿಯಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಘು ಗೌಡ ಅವರು ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ದೂರು ಸಲ್ಲಿಸಿದರು.

ಮುಖಂಡರಾದ ಮಂಜುನಾಥ್, ಪ್ರದೀಪ, ದಯಾಕರ್, ಮೋಹನ್, ಹೊಸಹಳ್ಳಿ ಶಿವು, ನಾಗಾನಂದ, ವೈರಮುಡಿ, ಶಶಿಕುಮಾರ್, ಪ್ರಸನ್ನಕುಮಾರ್, ಶಿವಕುಮಾರ್, ಲಿಂಗರಾಜು, ಧರಣಿ, ಶಂಕರ್ ಇತರರಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!