ಕಾಂಗ್ರೆಸ್ ಟಿಕೆಟ್ ಗೆ ಭಿಕ್ಷೆ ಬೇಡುವ ಸ್ಥಿತಿ: ಜೋಶಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ವಿವೇಚನಾ ರಹಿತವಾಗಿ ಮಾತನಾಡುತ್ತಿದ್ದು, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಅರಿತುಕೊಳ್ಳಬೇಕು. ಸಣ್ಣಪುಟ್ಟ ಪಕ್ಷಗಳಿಗೆ ಟಿಕೆಟ್ ಬಿಟ್ಟುಕೊಡಲು ಭಿಕ್ಷೆ ಬೇಡುವಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹರಿಹಾಯ್ದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಗೆ ಎಷ್ಟು ನಾಲಿಗೆ ಇದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದ ದೇಶದ ಜನ ಇವರನ್ನು ತಿರಸ್ಕರಿಸಿದ್ದಾರೆ. 52 ಸ್ಥಾನಗಳಿದ್ದು, ಬರುವ ದಿನಗಳಲ್ಲಿ ಅದು ಕಡಿಮೆಯಾಗಲಿವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನತಾದಳ ಬಿಟ್ಟು ಕಾಂಗ್ರೆಸ್ ಬಂದಿರುವುದರಿಂದ ಸಿದ್ದರಾಮಯ್ಯ ಅವರನ್ನು ಸಿಎಂ‌ ಮಾಡಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಹಲವು ಸಂದರ್ಭಗಳಲ್ಲಿ ಇತರರಿಗೆ ಬಾಯಿ ಬಂದಾಗೆ ಮಾತನಾಡುತ್ತಾರೆ. ಅವರ ಮೇಲೆ ಪ್ರಕರಣ ದಾಖಲಾಗಿಲ್ಲ.‌ ಈಗ ಅನಂತ ಕುಮಾರ ಹೆಗಡೆ ಆಗಿರಬಹುದು, ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ವಿರುದ್ಧ ಪೋಸ್ಟ್ ಹಾಕಿದರೆ ಪ್ರಕರಣ ದಾಖಲಾಗಿಸುತ್ತಿದೆ. ಇದು ಸರ್ಕಾರದ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು ಸ್ಪಷ್ಟವಾಗುತ್ತಿದೆ ಎಂದು ತಿಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!