April 17, 2026
Friday, April 17, 2026
spot_img

ಕೊನೆಗೂ ಹಾರ್ಮುಜ್ ಜಲಸಂಧಿ ಓಪನ್: ಇರಾನ್ ಗೆ ಥ್ಯಾಂಕ್ಯೂ ಎಂದ ಟ್ರಂಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಸ್ಥಗಿತಗೊಂಡಿದ್ದ ಹಾರ್ಮುಜ್ ಜಲಸಂಧಿ ಕೊನೆಗೂ ಮುಕ್ತವಾಗುತ್ತಿದ್ದು, ಎಲ್ಲಾ ದೇಶಗಳ ವಾಣಿಜ್ಯ ಹಡಗುಗಳ ಸಾಗಣೆಗೆ ಜಲಸಂಧಿಯನ್ನು ತೆರೆಯುವುದಾಗಿ ಇರಾನ್ ಘೋಷಣೆ ಮಾಡಿದೆ.

ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಇರಾನ್ ಈ ನಿರ್ಧಾರ ತೆಗೆದುಕೊಂಡಿದೆ.

ಈ ಬಗ್ಗೆ ಪೋಸ್ಟ್‌ ಮಾಡಿರುವ ಇರಾನ್​ ವಿದೇಶಾಂಗ ಸಚಿವ ಅರಘ್ಚಿ, ‘ಲೆಬನಾನ್‌ನಲ್ಲಿನ ಕದನ ವಿರಾಮಕ್ಕೆ ಒಪ್ಪಿಗೆ ಸಿಕ್ಕಿದ ಹಿನ್ನೆಲೆ ಹಾರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ಹಡಗುಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇತ್ತ ಇರಾನ್‌ನ ಈ ಘೋಷಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪೋಸ್ಟ್‌ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದು, ‘ಇರಾನ್ ಜಲಸಂಧಿ ಸಂಪೂರ್ಣವಾಗಿ ಮುಕ್ತವಾಗಿದೆ ಮತ್ತು ಪೂರ್ಣ ಮಾರ್ಗಕ್ಕೆ ಸಿದ್ಧವಾಗಿದೆ. ಥ್ಯಾಂಕ್ಯೂ ಇರಾನ್’ ಎಂದು ಅವರು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !