2 ಗಂಟೆಯಲ್ಲಿ 40 ಜನರ ಮೇಲೆರಗಿದ ಬೀದಿ ನಾಯಿ: ಆಸ್ಪತ್ರೆಯ ಐಸಿಯು ವಿಭಾಗ ಭರ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನ ಬೀದಿ ನಾಯಿ ಅಟ್ಟಹಾಸಕ್ಕೆ ಸ್ಥಳೀಯರು ವಿಲ ವಿಲ ಒದ್ದಾಡಿದ್ದಾರೆ.  ಬೀದಿ ನಾಯಿಯೊಂದು ಎರಡು ಗಂಟೆಗಳ ಅವಧಿಯಲ್ಲಿ 40 ಜನರ ಮೇಲೆ ದಾಳಿ ಮಾಡಿದ್ದು, ಆ ಪ್ರದೇಶದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ರೋಗಿಗಳಿಂದ ತುಂಬಿ ಹೋಗಿದೆ. ನಾಯಿ ಕಚ್ಚಿದ ಜನರು ಆಸ್ಪತ್ರೆಯಲ್ಲಿ ಕ್ಯೂ ಕಟ್ಟಿದ್ದು ನೋಡಿ ಆಸ್ಪತ್ರೆ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.

ಇದೀಗ ಆಸ್ಪತ್ರೆ ಸಿಬ್ಬಂದಿ ಎಲ್ಲರಿಗೂ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದಾರೆ.  ಬರ್ಮಾರ ಜಿಲ್ಲೆಯ ಕಲ್ಯಾಣಪುರ ಪ್ರದೇಶದಲ್ಲಿ ಬೀದಿ ನಾಯಿಯೊಂದು ಕೇವಲ 2 ಗಂಟೆಯಲ್ಲಿ ಒಟ್ಟು 40 ಮಂದಿ ದಾಳಿ ನಡೆಸಿ ಗಾಯಗೊಳಿಸಿದೆ.

ನಾಯಿ ದಾಳಿಗೆ ಭಯಬಿದ್ದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಮಾಹಿತಿ ಪಡೆದ ಸ್ಥಳೀಯ ನಗರಸಭೆ ಅಧಿಕಾರಿಗಳು ಕ್ಷಿಪ್ರಗತಿಯಲ್ಲಿ ದೌಡಾಯಿಸಿದ್ದಾರೆ. ಆ ಬೀದಿ ನಾಯಿಗಾಗಿ ಹುಡುಕಾಟ ಆರಂಭಿಸಿ ಎರಡೂ ತಂಡಗಳು ಬೆನ್ನಟ್ಟಿ ಕೊನೆಗೆ ನಾಯಿಯನ್ನು ಸೆರೆ ಹಿಡಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!