June 1, 2026
Monday, June 1, 2026
spot_img

ಕಂದಮ್ಮನ ಪಾಲಿಗೆ ರಾಕ್ಷಸರಾದ ಬೀದಿ ನಾಯಿಗಳು, ಐದು ತಿಂಗಳ ಮಗು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೀದಿ ನಾಯಿಗಳ ದಾಳಿಗೆ ಐದು ತಿಂಗಳ ಕಂದಮ್ಮ ಪ್ರಾಣಬಿಟ್ಟ ಘಟನೆ ಬೀದರ್‌ನ ಹುಮ್ನಾಬಾದ್‌ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ.

ಸುಧಾ ಹಾಗೂ ಸಿದ್ದಪ್ಪ ದಂಪತಿಯ ಐದು ತಿಂಗಳ ಶಿವಾನಿ ಮೃತರು. ಕಂದಮ್ಮನನ್ನು ತಾಯಿ ಮನೆಯ ಪಡಸಾಲೆಯಲ್ಲಿ ಮಲಗಿಸಿ ಕೆಲಸ ಮಾಡುತ್ತಿದ್ದರು.

ಈ ವೇಳೆ ಮನೆಯೊಳಕ್ಕೆ ಎಂಟ್ರಿ ಕೊಟ್ಟ ರಕ್ಕಸರೂಪಿ ನಾಯಿಗಳು ಕಂದನನ್ನು ಕಚ್ಚಿ ಎಸೆದಿವೆ. ಜೀವ ಇದೆಯೋ ಇಲ್ಲವೋ ಎಂದು ಕಂದನನ್ನು ಎದೆಗಪ್ಪಿಕೊಂಡು ಪೋಷಕರು ಆಸ್ಪತ್ರೆಗೆ ಓಡಿದ್ದಾರೆ.

ಮಗು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಐದು ತಿಂಗಳ ಕಂದನನ್ನು ಕಳೆದುಕೊಂಡ ಪೋಷಕರು ಕಣ್ಣೀರಿಡುತ್ತಿದ್ದಾರೆ.

ಬೀದಿ ನಾಯಿಗಳಿಗೆ ಕಡಿವಾಣ ಹಾಕದ ಪುರಸಭೆ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !