ತೈವಾನ್‌ನಲ್ಲಿ ಭೂಕಂಪದ ಎಫೆಕ್ಟ್‌! ಕುಸಿದ ಗುಡ್ಡ, ಬೊಂಬೆಯಂತೆ ತೂಗಾಡುತ್ತಿರುವ ರೈಲಿನ ವಿಡಿಯೋ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೈವಾನ್‌ನ ಆಗ್ನೇಯ ಪ್ರದೇಶದಲ್ಲಿ ಭಾನುವಾರ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ಹಲವೆಡೆ ಕಟ್ಟಡಗಳು ಕುಸಿದಿದ್ದು, ಹಲವು ರೈಲುಗಳು ಹಳಿ ತಪ್ಪಿವೆ. ಭೂಕಂಪದ ಕೇಂದ್ರಬಿಂದು ತೈತುಂಗ್ ಕೌಂಟಿಯಲ್ಲಿತ್ತು. ಶನಿವಾರ ಸಂಜೆ ಅದೇ ಪ್ರದೇಶದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಮರುದಿನವೇ ಮತ್ತೊಮ್ಮೆ ಭೂಕಂಪ ಸಂಭವಿಸಿದೆ.

ಭೂಕಂಪದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 146ಮಂದಿ ಗಾಯಗೊಂಡಿದ್ದಾರೆ. ಯುಲಿಯಲ್ಲಿ ರಸ್ತೆಯೊಂದರ ಮೇಲೆ ಸೇತುವೆ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ಹೋಗುತ್ತಿದ್ದ ವಾಹನಗಳು ಅವಶೇಷಗಳಡಿ ಸಿಲುಕಿಕೊಂಡಿದ್ದು, ಅಪಘಾತದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ತೈವಾನ್‌ನ ಡೊಂಗ್ಲಿ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನ ಮೇಲ್ಭಾಗ ಕುಸಿದಿದ್ದು, 20 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತೈವಾನ್ ರೈಲ್ವೆ ಆಡಳಿತ ತಿಳಿಸಿದೆ. ಈ ವೇಳೆ ಹಳಿ ಮೇಲೆ ನಿಂತಿದ್ಆದ ರೈಲುಗಳು ಆಟದ ಬೊಂಬೆಗಳಂತೆ ತೂಗಾಡಿರುವ ವಿಡಿಯೋ ವೈರಲ್‌ ಆಗಿವೆ.

ಚಿಕ್ ಮತ್ತು ಲಿಯುಶಿಶಿ ಪರ್ವತ ಪ್ರದೇಶಗಳಲ್ಲಿ ಭೂಕುಸಿತದಿಂದಾಗಿ ರಸ್ತೆಗಳು ಸಂಪೂರ್ಣ ಮುಚ್ಚಿಹೋಗಿವೆ. ಸುಮಾರು 600 ಪ್ರವಾಸಿಗರು ಈ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕೇಂದ್ರ ಸುದ್ದಿ ಸಂಸ್ಥೆ ತಿಳಿಸಿದೆ. ಈ ಭೂಕಂಪದಲ್ಲಿ ಹೆಚ್ಚಿನ ಪ್ರಾಣಹಾನಿಯಾಗಿಲ್ಲ ಮತ್ತು ಆಸ್ತಿ ಹಾನಿ ಮಾತ್ರ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!