Wednesday, June 7, 2023

Latest Posts

MUST READ| ಬಸ್‌ ಚಲಾಯಿಸುವಾಗ ಪ್ರಜ್ಞೆ ತಪ್ಪಿದ ಚಾಲಕ: 67 ಜನರ ಜೀವ ಉಳಿಸಿದ ವಿದ್ಯಾರ್ಥಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಲಾ ಬಸ್‌ನಲ್ಲಿ 67 ವಿದ್ಯಾರ್ಥಿಗಳಿದ್ದು, ಬಸ್ಸಿನ ಚಾಲಕ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ವಿದ್ಯಾರ್ಥಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಮೆರೆದು ಬಸ್ಸಿನಲ್ಲಿದ್ದ ಎಲ್ಲರ ಪ್ರಾಣ ಉಳಿಸಿದ್ದಾನೆ.

67 ವಿದ್ಯಾರ್ಥಿಗಳೊಂದಿಗೆ ಶಾಲಾ ಬಸ್ ಹೊರಟಿದೆ. ಅಷ್ಟರಲ್ಲಿ ಚಾಲಕನಿಗೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಸ್ ನಿಯಂತ್ರಣ ತಪ್ಪಿ ಟ್ರಾಫಿಕ್‌ನೊಳಗೆ ಹೊಕ್ಕಿದೆ. ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಏಕಾಏಕಿ ಕೂಗಾಡಿದರು. ದಿಲ್ಲನ್ ರೀವ್ಸ್ ವಿದ್ಯಾರ್ಥಿ ಚಾಲಕನ ಬಳಿ ಬಂದು  ಬ್ರೇಕ್ ಪೆಡಲ್ ಅನ್ನು ಒತ್ತಿ ಬಸ್ಸನ್ನು ನಿಲ್ಲಿಸಿದರು. ಕೂಡಲೇ 911 ನಂಬರ್‌ಗೆ ಕರೆ ಮಾಡುವಂತೆ ಕೇಳಿದರು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ತಕ್ಷಣ ಚಿಕಿತ್ಸೆಗಾಗಿ ಬಸ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿಲ್ಲನ್ ತಕ್ಷಣ ಪ್ರತಿಕ್ರಿಯಿಸಿ ಎಲ್ಲರ ಜೀವ ಉಳಿಸುವಲ್ಲಿ ಅಸಾಧಾರಣ ಧೈರ್ಯವನ್ನು ತೋರಿಸಿದರು. ಈ ಘಟನೆಯ ನಂತರ ಕಾರ್ಟರ್ ಮಿಡಲ್ ಸ್ಕೂಲ್ ಆಡಳಿತವು ಪತ್ರಿಕಾಗೋಷ್ಠಿ ನಡೆಸಿ ದಿಲ್ಲನ್ ಧೈರ್ಯವನ್ನು ಶ್ಲಾಘಿಸಿತು. ತಮ್ಮ ಮಗುವಿನ ಬಗ್ಗೆ ಹೆಮ್ಮೆಯಿದೆ ಎಂದು ಬಾಲಕನ ಪೋಷಕರು ಹೇಳಿದ್ದಾರೆ. ಸಕ್ರಿಯವಾಗಿ ಸ್ಪಂದಿಸಿ ಹಲವು ಜೀವಗಳನ್ನು ಉಳಿಸಿದ ಡಿಲನ್ ರೀವ್ಸ್ ಅವರ ಧೈರ್ಯವನ್ನು ಮೆಚ್ಚಲೇಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!