ಹೊಸದಿಗಂತ ವರದಿ, ಯಲ್ಲಾಪುರ :
ಹೊಲದಲ್ಲಿ ಬೇಲಿ ಹಾಕುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿ, ತೀವ್ರತರನಾದ ಗಾಯಗೊಳಿಸಿರುವ ಘಟನೆ ಶುಕ್ರವಾರ ತಾಲೂಕಿನ ಕಿರವತ್ತಿಯ ಕಂಚನಳ್ಳಿ ಗ್ರಾಮದ ಮುಂಡವಾಡದಲ್ಲಿ ನಡೆದಿದೆ.
ಪರಶುರಾಮ ದುಗ್ಗಾ ನಾಯ್ಕ (54) ಎಂಬಾತ ತನ್ನ ತನ್ನ ಹೊಲದಲ್ಲಿ ಬೇಲಿ ಹಾಕುತ್ತಿದ್ದಾಗ ಕರಡಿಯೊಂದು ಹಠಾತ್ ದಾಳಿ ನಡೆಸಿದ್ದು, ತಲೆಗೆ, ಮುಖಕ್ಕೆ, ಮೈಕೈ ಮೇಲೆ ಭಾರಿ ಗಾಯಗೊಳಿಸದೆ. ತಕ್ಷಣ ಆತನನ್ನು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.