ಹೊಸದಿಗಂತ ವರದಿ, ಅಂಕೋಲಾ:
ಅಪಾಯಕಾರಿ ಸಲ್ಪ್ಯೂರಿಕ್ ಆಸಿಡ್ ತುಂಬಿದ ಟ್ಯಾಂಕರ್ ಲಾರಿಯೊಂದು ಪಲ್ಟಿಯಾಗಿ ಆಸಿಡ್ ಸೋರಿಕೆಯಾದ ಘಟನೆ ತಾಲೂಕಿನ ಕಂಚಿನಬಾಗಿಲ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.
ಆಂಧ್ರಪ್ರದೇಶದಿಂದ ಗೋವಾಕ್ಕೆ ಸಲ್ಪ್ಯೂರಿಕ್ ಆಸಿಡ್ ತುಂಬಿ ಸಾಗುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಆಸಿಡ್ ಸೋರಿಕೆಯಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಯಲ್ಲಿ ಹರಿದು ಹೊಗೆ ಆವರಿಸಿದೆ.
ಸುಮಾರು 30 ಟನ್ ಗಳಷ್ಟು ಸಲ್ಪ್ಯೂರಿಕ್ ಆಸಿಡ್ ಟ್ಯಾಂಕರ್ ಲಾರಿಯಲ್ಲಿ ತುಂಬಿದ್ದು, ಅಂಕೋಲಾ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸಿಡ್ ಚರಂಡಿ ಸೇರದಂತೆ ತಡೆದು ಪಕ್ಕದಲ್ಲಿ ಹೊಂಡ ತೋಡಿ ಹಂತ ಹಂತವಾಗಿ ನಾಶ ಪಡಿಸಲು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.