ಪಾಕ್ ರಾಜಧಾನಿಯಲ್ಲಿ ಆತ್ಮಹುತಿ ಸ್ಫೋಟ: ಪೊಲೀಸ್ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಆತ್ಮಹುತಿ ಸ್ಫೋಟ ನಡೆಡಿದ್ದು, ಈ ಘಟನೆಯಲ್ಲಿ ಒಬ್ಬ ಪೊಲೀಸ್ ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿವೆ .

ಇಸ್ಲಾಮಾಬಾದ್‌ನ ಐ-10/4 ಸೆಕ್ಟರ್ ಬಳಿ ಸ್ಫೋಟ ಉಂಟಾಗಿದೆ. ಘಟನೆಯ ಬಳಿಕ ಸ್ಥಳಕ್ಕೆ ವಿಶೇಷ ಭಯೋತ್ಪಾದನಾ ನಿಗ್ರಹ ಪಡೆ ಧಾವಿಸಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಘಟನೆಯಲ್ಲಿ ಸಾವನ್ನಪ್ಪಿರುವ ಅಧಿಕಾರಿಯನ್ನು ಹೆಡ್ ಕಾನ್ಸ್ಟೇಬಲ್ ಆದಿಲ್ ಹುಸೇನ್ ಎಂದು ಗುರುತಿಸಿದ್ದಾರೆ. ವರದಿಗಳ ಪ್ರಕಾರ ಇಂದು ಬೆಳಗ್ಗೆ 10:15ರ ವೇಳೆಗೆ ಮಹಿಳೆ ಹಾಗೂ ಪುರುಷ ಪ್ರಯಾಣಿಸುತ್ತಿದ್ದ ವಾಹನವನ್ನು ಪೊಲೀಸರು ಗುರುತಿಸಿದ್ದಾರೆ. ಅನುಮಾನಾಸ್ಪದವಾಗಿ ಕಂಡ ವಾಹನವನ್ನು ಅಧಿಕಾರಿಗಳು ತಪಾಸಣೆ ನಡೆಸಲು ಮುಂದಾದಾಗ ದಂಪತಿ ವಾಹನದಿಂದ ಹೊರಬಂದಿದ್ದಾರೆ. ಬಳಿಕ ಪುರುಷ ಯಾವುದೋ ನೆಪ ಹೇಳಿ ಮತ್ತೆ ಕಾರಿನೊಳಗೆ ಹೋಗಿದ್ದು, ಈ ವೇಳೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎನ್ನಲಾಗಿದೆ.

ಸ್ಫೋಟ ಉಂಟಾದಾಗ ಪಕ್ಕದಲ್ಲಿದ್ದ ಅಧಿಕಾರಿ ಸಾವನ್ನಪ್ಪಿದ್ದಾರೆ. ಸುತ್ತಮುತ್ತಲಿದ್ದ ನಾಲ್ವರಿಗೆ ಗಾಯಗಳಾಗಿವೆ ಎಂದು ಪೊಲೀಸ್ ಉಪ ಮಹಾನಿರೀಕ್ಷಕ ಸೊಹೈಲ್ ಜಾಫರ್ ಚಟ್ತಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!