ಹೊಸದಿಗಂತ ವರದಿ, ಮಂಗಳೂರು:
ಮೈಸೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುಂಡೋಡಿ ಮೂಲದ ಸಹೋದರಿಬ್ಬರು ಆ.15 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ನೆಲೆಸಿದ್ದ ದಿ. ಧರ್ಮಪಾಲ ಮುಂಡೋಡಿ ಮತ್ತು ದಿ.ಪುಷ್ಪಾ ದಂಪತಿಗಳ ಪುತ್ರರಾದ ನಾಗೇಂದ್ರ ಮುಂಡೋಡಿ (39) ಹಾಗೂ ಸನತ್ ಮುಂಡೋಡಿ (36) ಮೈಸೂರಿನ ತಮ್ಮ ಮನೆಯಲ್ಲಿ ಮಾನಸಿಕ ಖಿನ್ನತೆಗೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಮೃತರ ಅಂತ್ಯ ಸಂಸ್ಕಾರವನ್ನು ಆ.16 ರಂದು ಮೈಸೂರಿನಲ್ಲಿ ನಡೆಸಲಾಯಿತು. ಮೃತರು ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.