ತುಂಬಾ ದಪ್ಪಗಿದ್ದೀರಾ..? ಈ ಜ್ಯೂಸ್‌ ಕುಡಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋರೆಕಾಯಿ ಎಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ಗೊತ್ತಾ..? ಸೋರೆಕಾಯಿಯನ್ನು ತರಕಾರಿಯಾಗಿ ಸೇವಿಸುವುದಕ್ಕಿಂತ, ಅದನ್ನು ಜ್ಯೂಸ್ ಆಗಿ ತೆಗೆದುಕೊಂಡರೆ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದಲ್ಲಿರುವ ವಿಟಮಿನ್, ಪೊಟ್ಯಾಶಿಯಂ, ಕಬ್ಬಿಣ ಮತ್ತು ನಾರಿನಂಶ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೊರೇಕಾಯಿ ಜ್ಯೂಸ್ ಕುಡಿಯುವುದರಿಂದ ತೂಕವನ್ನು ಬೇಗ ಕಳೆದುಕೊಳ್ಳಬಹುದು. ಅಧಿಕ ರಕ್ತದೊತ್ತಡ ನಿಯಂತ್ರಣ, ಯಕೃತ್ತಿನ ಸಮಸ್ಯೆ ನಿವಾರಣೆಯಾಗುತ್ತದೆ. ಸೋರೆಕಾಯಿ  ಜ್ಯೂಸ್ ಅನ್ನು ನೀವು ಮುಂಜಾನೆ ಖಾಲಿ ಹೊಟ್ಟೆಗೆ ಕುಡಿದರೆ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು. ಈಗ ಸೋರೆಕಾಯಿ ಜ್ಯೂಸ್ ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು

ಮಧ್ಯಮ ಗಾತ್ರದ ಸೋರೆಕಾಯಿ
10 ಪುದೀನಾ ಎಲೆ
ಸ್ವಲ್ಪ  ಶುಂಠಿಯನ್ನು
ರುಚಿಗೆ ಕಪ್ಪು ಉಪ್ಪು
ಅರ್ಧ ಕಪ್ ಐಸ್ ಕ್ಯೂಬ್ಸ್
ಒಂದು ನಿಂಬೆಹಣ್ಣು

ಮಾಡುವ ವಿಧಾನ

ಸೋರೆಕಾಯಿಯ ಸಿಪ್ಪೆ ಸುಲಿದು ಸ್ವಚ್ಛವಾಗಿ ತೊಳೆಯಿರಿ ಮತ್ತು ತುಂಡುಗಳಾಗಿ ಕತ್ತರಿಸಿ. ನಂತರ ಮಿಕ್ಸರ್ನಲ್ಲಿ ಹಾಕಿ ಗ್ರೈಂಡ್‌ ಮಾಡಿ ಒಂದು ಬಟ್ಟಲಿಗೆ ಹಾಕಿ ನಂತರ ಸುಲಿದ ಶುಂಠಿ, ಪುದೀನಾ, ಉಪ್ಪು ಮತ್ತು ಐಸ್ ತುಂಡುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ತೆಳುವಾದ ಬಟ್ಟೆಯಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ ಸೋಸಿಕೊಳ್ಳಿ. ಸೋಸಿದ ರಸಕ್ಕೆ ನಿಂಬೆಹಣ್ಣು ಹಿಂಡಿದರೆ ಸೋರೆಕಾಯಿ ಜ್ಯೂಸ್‌ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!