ಹಮಾಸ್‌ ಪರ ಕೆಲಸ: ಇಸ್ರೇಲ್‌ನಲ್ಲಿ ಅಲ್‌ಜಜೀರಾ ಚಾನೆಲ್‌ ಬಂದ್‌ ಮಾಡಿದ ನೆತನ್ಯಾಹು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಮಾಸ್‌ ವಿರುದ್ಧ ಸತತ ದಾಳಿ ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಇಸ್ರೇಲ್‌ ಸತತವಾಗಿ ದಾಳಿ ನಡೆಸಿ, ಉಗ್ರರನ್ನು ಸದೆಬಡಿಯುತ್ತಿದೆ. ಇಸ್ರೇಲ್‌ ದಾಳಿಯಲ್ಲಿ ನಾಗರಿಕರೂ ಮೃತಪಟ್ಟಿದ್ದಾರೆ.

ಇದರ ಬೆನ್ನಲ್ಲೇ, ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್‌ಜಜೀರಾ ಸುದ್ದಿವಾಹಿನಿಯನ್ನು ಇಸ್ರೇಲ್‌ ಸ್ಥಗಿತಗೊಳಿಸಿದೆ. ಚಾನೆಲ್‌ ಬಂದ್‌ ಮಾಡುವ ಕುರಿತು ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಘೋಷಣೆ ಮಾಡಿದ್ದಾರೆ.

ಅಲ್‌ಜಜೀರಾ ಚಾನೆಲ್‌ಅನ್ನು ಇಸ್ರೇಲ್‌ನಲ್ಲಿ ಸ್ಥಗಿತಗೊಳಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹಾಗಾಗಿ, ಚಾನೆಲ್‌ಅನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಜಮಿನ್‌ ನೆತನ್ಯಾಹು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಕುರಿತು ಬೆಂಜಮಿನ್‌ ನೆತನ್ಯಾಹು ವಕ್ತಾರ (ಅರಬ್‌ ವರ್ಲ್ಡ್)‌ ಒಫಿರ್‌ ಜೆಂಡಲ್‌ಮ್ಯಾನ್‌ ಕೂಡ ಮಾಹಿತಿ ನೀಡಿದ್ದಾರೆ. ‘ಕೂಡಲೇ ಅಲ್‌ಜಜೀರಾ ಚಾನೆಲ್‌ಅನ್ನು ಸ್ಥಗಿತಗೊಳಿಸುತ್ತೇವೆ. ಕೇಬಲ್‌ ಹಾಗೂ ಸ್ಯಾಟಲೈಟ್‌ ಟೆಲಿವಿಷನ್‌ ಕಂಪನಿಗಳಿಂದ ಚಾನೆಲ್‌ಅನ್ನು ತೆಗೆಯಲಾಗುತ್ತದೆ. ವರದಿಗಾರರು ಕೂಡ ಕೆಲಸ ಮಾಡಲು ಬಿಡುವುದಿಲ್ಲ’ಎಂದು ತಿಳಿಸಿದ್ದಾರೆ.

ಇದಾದ ಬೆನ್ನಲ್ಲೇ, ಚಾನೆಲ್‌ಗೆ ತೆರಳಿದ ಪೊಲೀಸರು ಸುದ್ದಿವಾಹಿನಿಯನ್ನು ಸ್ಥಗಿತಗೊಳಿಸಿದ್ದಾರೆ. ಇದಕ್ಕೆ ಅಲ್‌ಜಜೀರಾ ಪ್ರತಿಕ್ರಿಯಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದೆ.

ಕತಾರ್‌ ಮೂಲದ ಸುದ್ದಿವಾನಿಯಾದ ಅಲ್‌ಜಜೀರಾ, ಹಮಾಸ್‌ ಪರವಾಗಿ ಕೆಲಸ ಮಾಡುತ್ತಿದೆ. ಇದರಿಂದ ಇಸ್ರೇಲ್‌ ಭದ್ರತೆಗೆ ಧಕ್ಕೆಯಾಗುತ್ತಿದೆ ಎಂಬುದು ಇಸ್ರೇಲ್‌ ವಾದವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!