ಪ್ರಚಾರಕ್ಕಾಗಿ ಮಗುವನ್ನು ದತ್ತು ಪಡೆದಿದ್ದೀರ: ಟೀಕಿಸಿದವರಿಗೆ ನಟಿ ಸನ್ನಿ ಲಿಯೋನಿ ಖಡಕ್‌ ಉತ್ತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿನಿ ಲೋಕದಿಂದ ದೂರವಿರುವ ಸನ್ನಿ ಲಿಯೋನಿ, ಹೆಣ್ಣು ಮಗುವನ್ನು ದತ್ತು ಪಡೆದಿರುವುದು ಕೇವಲ ಪ್ರಚಾರಕ್ಕೆ ಮಾತ್ರ ಎಂದು ಟೀಕಿಸಿದ ಕೆಲ ನೆಟ್ಟಿಗರಿಗೆ ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ.
2017ರಲ್ಲಿ ಒಂದು ಹೆಣ್ಣುಮಗುವನ್ನು ದತ್ತು ಪಡೆದ ಸನ್ನಿ ಲಿಯೋನಿ ಹಾಗೂ ಡ್ಯಾನಿಯಲ್‌ ವೇಬರ್‌, ಬಾಡಿಗೆ ತಾಯ್ತನದ ಮೂಲಕ ಇಬ್ಬರು ಗಂಡು ಮಕ್ಕಳಿಗೂ ತಾಯಿಯಾದರು.

Sunny Leone celebrates daughter Nisha's 6th birthday in their sparkling new  Mumbai home, see inside photos | Entertainment News,The Indian Expressಈ ಮೂವರು ಮಕ್ಕಳೊಂದಿಗಿನ ಫೋಟೋಗಳನ್ನು ಸನ್ನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಒಂದು ಫೋಟೊದಲ್ಲಿ ಸನ್ನಿ ತನ್ನ ಅವಲಿ ಮಕ್ಕಳನ್ನು ಕೈ ಹಿಡಿದು ನಡೆಸುತ್ತಿದ್ದು, ಮಗಳು ಒಬ್ಬಳೇ ನಡೆಯುತ್ತಿರುವ ಬಗ್ಗೆ ಕೆಲವರು ಕಮೆಂಟ್‌ ಮಾಡಿದ್ದಾರೆ. ಸನ್ನಿ ಲಿಯೋನಿ ಹೆಣ್ಣು ಮಗುವನ್ನು ದತ್ತು ಪಡೆದಿರುವುದು ಕೇವಲ ಪಬ್ಲಿಸಿಟಿ ಗಿಮಿಕ್‌ ಎಂದು ಟೀಕಿಸಿದ್ದಾರೆ.

Sunny Leone trolled for never holding Nisha Weber's hand, netizens claim  she adopted her only for publicity: watch video

ಇದಕ್ಕೆ ಸಂದರ್ಶನವೊಂದರಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಸನ್ನಿ, ಕೇವಲ ಒಂದು ಫೋಟೋ ಆಧರದ ಮೇಲೆ ನಾನು ಹೇಗೆ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎನ್ನುವುದನ್ನು ಜಡ್ಜ್​ ಮಾಡೋದು ಬೇಡ. ಈ ಮೂಲಕ ನನಗೆ ನನ್ನ ತಾಯ್ತನದ ಜವಾಬ್ದಾರಿಯ ಪಾಠ ಅಗತ್ಯವಿಲ್ಲ.

Sunny Leone And Daughter, Nisha's Latest 'Mother-Daughter' Moment Is Too  Adorable To Missಎಲ್ಲೋ ಕುಳಿತು ನಮ್ಮ ಜೀವನದ ಬಗ್ಗೆ ಹೇಗೆ ಕಮೆಂಟ್‌ ಮಾಡುತ್ತೀರಿ. ನಾನು, ಮಕ್ಕಳು, ನನ್ನ ಕುಟುಂಬ ಎಲ್ಲರೂ ಪ್ರೀತಿಯಿಂದ ಬೆಸೆದುಹೋಗಿದ್ದೇವೆ. ಈ ರೀತಿ ಟ್ರಾಲ್‌ ಮಾಡುವ ಮುನ್ನ ಯೋಚಿಸಿ, ಈ ಬಗ್ಗೆ ಕಮೆಂಟ್‌ ಮಾಡೋದು ನಿಲ್ಲಿಸಿ ಎಂದು ಮಾತ್ರ ನನಗೆ ಹೇಳಲಾಗುತ್ತದೆ ಎಂದು ಟ್ರೋಲಿಗರಿಗೆ ಮಾತಿನಲ್ಲೇ ಬಿಸಿ ಮುಟ್ಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!