Thursday, August 18, 2022

Latest Posts

ಮಧ್ಯಪ್ರದೇಶ ಸಿಎಂಗೆ ರುಚಿಯಿಲ್ಲದ ತಣ್ಣನೆಯ ಟೀ ಪೂರೈಕೆ: ಅಧಿಕಾರಿಗಳಿಗೆ ಶೋಕಾಸ್ ನೋಟಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಅವರಿಗೆ ತಣ್ಣಾಗಾಗಿದ್ದ ಚಹಾ ನೀಡಿದ್ದಕ್ಕಾಗಿ ಕಿರಿಯ ನಾಗರಿಕ ಸರಬರಾಜು ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿದ ವಿಲಕ್ಷಣ ಘಟನೆ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ರುಚಿಯಿಲ್ಲದ ಮತ್ತು ತಣ್ಣನೆಯ ಟೀ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ನೋಟಿಸ್​​ಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.

ನಗರ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕಾಗಿ ಛತ್ತರ್​ಪುರ್ ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ರುಚಿಯಿಲ್ಲದ ಮತ್ತು ತಣ್ಣನೆಯ ಟೀ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಿಡಬ್ಲೂಡಿ ಇಲಾಖೆಯ ಅಧಿಕಾರಿ ರಾಕೇಶ್​ ಕನೌಹಾಗೆ ನೋಟಿಸ್ ನೀಡಲಾಗಿದೆ ಎಂದು ರಾಜನಗರ್​​ ವಿಭಾಗದ ಸಹಾಯಕ ಕಮೀಷನರ್​​ ಡಿ.ಪಿ ದ್ವಿವೇದಿ ತಿಳಿಸಿದ್ದಾರೆ.

ಜುಲೈ 11ರಂದು ಈ ಘಟನೆ ನಡೆದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ರೇವಾಗೆ ಹೋಗುವ ಸಂದರ್ಭದಲ್ಲಿ ಛತ್ತರ್​ಪುರ್ ಜಿಲ್ಲೆಯ ಖಜುರಾಹೋ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಲು ಉಳಿದುಕೊಂಡಿದ್ದರು. ಈ ವೇಳೆ ಉಪಹಾರ, ಟೀ ಪೂರೈಕೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ವಿಐಪಿ ಒಬ್ಬರ ಶಿಷ್ಟಾಚಾರದ ಉಲ್ಲಂಘನೆ ಎಂದು ಉಲ್ಲೇಖ ಮಾಡಲಾಗಿದೆ. ಸೂಕ್ತವಾದ ಕಾರಣ ನೀಡದಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!