ಉದಯ್​ಪುರ ಶಿರಚ್ಛೇದ ಪೋಸ್ಟ್​ ಹಂಚಿಕೊಂಡ ಬಾಲಕಿಗೆ ಬಂತು ಕಾಶ್ಮೀರದಿಂದ ಜೀವ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೂಪುರ್​ ಶರ್ಮಾ ಅವರ ಪೋಸ್ಟ್​ ಹಂಚಿಕೊಂಡಿದ್ದಕ್ಕೆ ರಾಜಸ್ಥಾನದ ಉದಯ್​ಪುರದ ಟೈಲರ್​ ಕನ್ಹಯ್ಯ ಲಾಲ್​ ಅವರ ಶಿರಚ್ಛೇದ ಮಾಡಿದ್ದ ಘಟನೆಯನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದ ಮುಂಬೈನ 15 ವರ್ಷದ ಬಾಲಕಿಗೆ ಕಾಶ್ಮೀರದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದು, ಆತನನ್ನು ಬಂಧಿಸಲಾಗಿದೆ.

ಉದಯ್​ಪುರದ ದರ್ಜಿ ಕನ್ಹಯ್ಯಾ ಲಾಲ್ ಹತ್ಯೆಯ ಕುರಿತು ಮುಂಬೈನ್ ಬಾಲಕಿ ಫೇಸ್​ಬುಕ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು 1.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಈಕೆ ತನ್ನ ಸಂಪರ್ಕ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರಿಂದ, ಆಕೆಗೆ ವಾಟ್ಸ್​ ಆ್ಯಪ್​, ಕರೆಯ ಮೂಲಕ ಜಮ್ಮು ಕಾಶ್ಮೀರದ 30 ವರ್ಷದ ಯುವಕನೊಬ್ಬ ಜೀವ ಬೆದರಿಕೆ ಹಾಕಿದ್ದಾನೆ.

ಈ ಬಗ್ಗೆ ಬಾಲಕಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. ಬಳಿಕ ಆರೋಪಿಯ ಪತ್ತೆಗೆ ಮುಂದಾದ ಪೊಲೀಸರು ಆತನ ಮೊಬೈಲ್​ ಸಂಖ್ಯೆಯನ್ನು ಮ್ಯಾಟ್ರಿಮೊನಿಯ ಮೂಲಕ ಪತ್ತೆ ಮಾಡಿದ್ದಾರೆ. ತಂಡವನ್ನು ರಚಿಸಿಕೊಂಡು ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಪೊಲೀಸರು ಆರೋಪಿಯನ್ನು ಬದ್ಗಾಮ್​ ಜಿಲ್ಲೆಯಲ್ಲಿ ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಫಯಾಜ್​ ಅಹ್ಮದ್​ ಎಂದು ಗುರುತಿಸಲಾಗಿದೆ.

ಆರೋಪಿಯನ್ನು ಜಮ್ಮು ಕಾಶ್ಮೀರದಲ್ಲಿ ಪತ್ತೆ ಮಾಡಲಾಗಿದೆ. ವಿಮಾನದಲ್ಲಿ ಮುಂಬೈಗೆ ಕರೆತಂದು ನಂತರ ಕೋರ್ಟ್​ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.3 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಫಯಾಜ್​ ಅಹ್ಮದ್​ಗೆ ಯಾವುದೇ ಕ್ರಿಮಿನಲ್ ಇತಿಹಾಸವಿಲ್ಲ. ವಿಚ್ಛೇದನ ಪಡೆದಿದ್ದು, 5 ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಪ್ರೊಫೈಲ್‌ಗಳನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!