ನೂಪುರ್‌ ಶರ್ಮಾ ಫೊಟೋ ಹಾಕಿದ ಉದ್ಯಮಿಗೆ ಕೊಲೆ ಬೆದರಿಕೆ: ಮೂವರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರವಾದಿ ಮುಹಮ್ಮದ್ ಬಗ್ಗೆ ಅನುಚಿತ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್‌ ಶರ್ಮಾ ವಿವಾದ ಬೂದಿ ಮುಚ್ಚಿದ ಕೆಂಡದಂತಿದೆ. ನೂಪುರ್‌ ಶರ್ಮಾ ಪರ/ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿದ್ದು, ಶರ್ಮಾ ಬೆಂಬಲಿಸಿದವರಿಗೆ ಜೀವ ಬೆದರಿಕೆ ಕರೆಗಳೂ ಸಹ ಬಂದಿವೆ. ನೂಪುರ್‌ ಶರ್ಮಾ ಫೋಟೋ ಇನ್ಸ್‌ಸ್ಟಾಗ್ರಾಂನಲ್ಲಿ ಹಾಕಿದ್ದಕ್ಕೆ ಬೆದರಿಕೆ ಕರೆ ಆರೋಪದ ಮೇರೆಗೆ ಮೂವರನ್ನು ಬಂಧಿಸಲಾಗಿದೆ. ಗುಜರಾತ್‌ನ ಸೂರತ್‌ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಡೆಸುತ್ತಿರುವ ಉದ್ಯಮಿ, ಪಾರ್ಕ್‌ನ ಇನ್‌ಸ್ಟಾಗ್ರಾಂ ಪುಟದಲ್ಲಿ ನೂಪುರ್ ಶರ್ಮಾ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಕ್ಕಾಗಿ ಮೂವರು ಕಿರಾತಕರು ಉದ್ಯಮಿಯೊಬ್ಬರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಫೋಟೋ ಹಾಕಿದ ಬಳಿಕ ಏಳು ಜನರಿಂದ ಕೊಲೆ ಬೆದರಿಕೆ ಕರೆ ಬಂದಿರುವುದಾಗಿ ಉದ್ಯಮಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಮೊಹಮ್ಮದ್ ಅತಾಶ್ ಬಾಜಿವಾಲಾ, ರಶೀದ್ ಭುರಾ ಮತ್ತು ಆಲಿಯಾ ಮೊಹಮ್ಮದ್ ಎಂದು ಗುರುತಿಸಲಾಗಿದೆ. ತಪ್ಪಿಸಿಕೊಂಡ ನಾಲ್ವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಬಂಧಿತ ಮೂವರ ವಿರುದ್ಧ ಐಪಿಸಿ ಸೆಕ್ಷನ್ 504 506 ಮತ್ತು 507 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆದರಿಕೆ ಬರುತ್ತಿದ್ದಂತೆ ಉದ್ಯಮಿ ಚಿತ್ರ ಡಿಲೀಟ್‌ ಮಾಡಿ, ಕ್ಷಮೆಯಾಚಿಸಿದರೂ ಸಹ ನೀವು ಸೂರತ್‌ನಲ್ಲಿ ಇರಬೇಕಾ..? ಬೇಡ್ವಾ ಎಂದು ಕರೆ ಮಾಡಿ ಬೆದರಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!