Sunday, October 2, 2022

Latest Posts

IPL ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸುರೇಶ್ ರೈನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 4 ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿದ್ದ ರೈನಾ, 2022 ರ ಹಿಂದಿನ ಹರಾಜಿನಲ್ಲಿ ಮಾರಾಟವಾಗಲಿಲ್ಲ.

35 ವರ್ಷದ ಸುರೇಶ್ ರೈನಾ ಅವರು ಆಗಸ್ಟ್ 15, 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು – ಅದೇ ದಿನ MS ಧೋನಿ ಅವರು ಭಾರತ ಕ್ರಿಕೆಟಿಗರಾಗಿ ನಿವೃತ್ತಿ ಘೋಷಿಸಿದರು. ತಮ್ಮ 13 ವರ್ಷಗಳ ಅಂತರರಾಷ್ಟ್ರೀಯ ಕೆರಿಯರ್‌ ನಲ್ಲಿ ಸುರೇಶ್ ರೈನಾ, 18 ಟೆಸ್ಟ್​, 226 ಏಕದಿನ ಪಂದ್ಯ ಹಾಗೂ 78 ಟಿ.20 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್‌ ಸರದಾರರಲ್ಲಿ ಅವರೂ ಒಬ್ಬರು. ಈ ಮೂಲಕ ಓರ್ವ ಆಟಗಾರನಾಗಿ ರೈನಾರನ್ನು ಮೈದಾನದಲ್ಲಿ ಕಾಣುವುದು ಅಭಿಮಾನಿಗಳ ಪಾಲಿಗೆ ಮುಗಿದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!