May 10, 2026
Sunday, May 10, 2026
spot_img

ಸೂರ್ಯವಂಶಿ ಕಮಾಲ್‌, 15ನೇ ವರ್ಷಕ್ಕೇ ಟೀಂ ಇಂಡಿಯಾ ಸೇರೋಕೆ ಸಜ್ಜಾದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರಿಕೆಟ್‌ ಪ್ರಿಯರ ಬಾಯಲ್ಲಿರೋದು ಒಂದೇ ಹೆಸರು ಅದೇ ವೈಭವ್‌ ಸೂರ್ಯವಂಶಿ! ಐಪಿಎಲ್‌ನಲ್ಲಿ ಕಮಾಲ್‌ ಮಾಡುತ್ತಿರುವ ಪುಟಾಣಿ ಪಟಾಕಿ ಟೀಂ ಇಂಡಿಯಾ ಸೇರೋಕೆ ಸಜ್ಜಾಗಿದ್ಯಾ?

ರಾಜಸ್ಥಾನ್‌ ರಾಯಲ್ಸ್‌ ತಂಡ ಸೇರಿರುವ ವೈಭವ್‌ ಸೂರ್ಯವಂಶಿ ಆಟ ನೋಡಿ ಜನರು ಫಿದಾ ಆಗಿದ್ದಾರೆ. ಈ ಬಾಲಕ ಇದೀಗ ಐರ್ಲೆಂಡ್‌ ವಿರುದ್ಧ ನಡೆಯುವ ಸರಣಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ.

ಈ ಮೂಲಕ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿಯಲಿದ್ದಾರೆ ವೈಭವ್‌. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ತಂಡದ ಬೆಂಚ್ ಬಲವನ್ನು ಪರೀಕ್ಷಿಸಲು ಉತ್ಸುಕವಾಗಿದ್ದು, ಎರಡನೇ ಹಂತದ ತಂಡದಲ್ಲಿ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.

ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಪರ ಆಡಲಿದ್ದಾರೆ. ಆಯ್ಕೆದಾರರು ಇತರ ಅನೇಕ ಆಟಗಾರರ ಜೊತೆಗೆ ಸೂರ್ಯವಂಶಿ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಮೂಲವೊಂದು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !