ಬಸ್ಟಾಂಡ್‌ನಲ್ಲಿ ನಿಂತಿದ್ದವರ ಮೇಲೆ ಹರಿದ ಎಸ್‌ಯುವಿ: ಏಳು ಮಂದಿ ಸಾವು, ಆರು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಸ್‌ ತಂಗುದಾಣದಲ್ಲಿ ನಿಂತಿದ್ದವರ ಮೇಲೆ ಎಸ್‌ಯುವಿ ಹರಿದು ಏಳು ಮಂದಿ ಸಾವನ್ನಪ್ಪಿದ್ದು, ಇನ್ನೂ ಆರು ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್‌ ನಲ್ಲಿ ನಡೆದಿದೆ.

ದಕ್ಷಿಣ ಅಮೆರಿಕನ್‌ ರಾಜ್ಯದಲ್ಲಿ ವಲಸಿಗರಿಗೆ ಆಶ್ರಯ ಕಲಿಸಿದ ತಾಣದ ಹೊರಗೆ ಈ ಘಟನೆ ಸಂಭವಿಸಿದೆ. “ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ಹಲವು ಮಂದಿಯ ಮೇಲೆ ಎಸ್‌ಯುವಿ ಹರಿದಿದೆ” ಎಂದು ಸ್ಥಳೀಯ ಪೊಲೀಸ್‌ ವಕ್ತಾರ ಮಾರ್ಟಿನ್‌ ಸ್ಯಾಂಡೊವಲ್‌ ಹೇಳಿದ್ದಾರೆ.

ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಆಗಮಿಸುವವರೆಗೆ ವಾಹನ ಚಾಲಕನನ್ನು ಸ್ಥಳೀಯರು ಹಿಡಿದಿಟ್ಟುಕೊಂಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿ, ಚಾಲಕನ ವಿರುದ್ಧ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!