Tuesday, March 28, 2023

Latest Posts

ಈಗಿರೋ 40% ಕಮಿಷನ್ ಸರ್ಕಾರ ಓಡಿಸೋಕೆ ನಾವು ಬಂದಿದ್ದೇವೆ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ಹೊಸದಿಗಂತ ವರದಿ ಹುಬ್ಬಳ್ಳಿ:

ಕರ್ನಾಟಕದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಭ್ರಷ್ಟಾಚಾರ ಮಾಡಿವೆ. ಈಗಿರುವ ಬಿಜೆಪಿ ಸರ್ಕಾರ ಸಹ ಶೇ. 40 ಕಮಿಷನ್ ಪಕ್ಷವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪ್ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದೆ. ಆಪ್ ಉತ್ತಮ ಪಕ್ಷವಾಗಿದ್ದು, ದೆಹಲಿ ಹಾಗೂ ಪಂಜಾಬನಲ್ಲಿ‌ ಮಾಡಿದ ಸಾಕಷ್ಟು ‌ಅಭಿವೃದ್ಧಿ ಕಾರ್ಯಗಳ ಬಗ್ಗೆ ಈಗ ಎಲ್ಲ ಕಡೆ ಚರ್ಚೆಯಾಗುತ್ತಿದೆ ಎಂದರು.

ಪಂಜಾಬ ಮುಖ್ಯಮಂತ್ರಿ ಭಗವಂತ ಮಾನ್ ಮಾತನಾಡಿ, ಕರ್ನಾಟಕದಲ್ಲಿದ್ದ ರೈತರ ಸಮಸ್ಯೆ ಪಂಜಾಬನಲ್ಲಿ ಸಹ ಇತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದರಿಂದ ಪ್ರಧಾನಿ ಮೋದಿ ವಾಪಾಸ್ ಪಡೆದರು. ಆದರೆ ರಾಜ್ಯದಲ್ಲಿ ಇನ್ನೂ ವಾಪಾಸ್ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳೇ ಪಿಂಚಣಿ ಯೋಜನೆ ಜಾರಿಗೆ ತರಲು ಚಿಂತನೆ ನಡೆದಿದೆ. ಗುತ್ತಿಗೆ ಆಧಾರದ ಮೇಲೆ‌ ಇದ್ದ 20 ಸಾವಿರ ಜನರನ್ನು‌ ನಮ್ಮ ಸರ್ಕಾರ ಕಾಯಂ ಮಾಡಿದೆ. ಇನ್ನೂ ಸಂಪೂರ್ಣ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಲು ಹೆಲ್ಫಲೈನ್ ಆರಂಭಿಸಿದ್ದು, ಅಧಿಕಾರಿ ಹಾಗೂ ಮಂತ್ರಿಗಳಿದ್ದರು ಸಹ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕರ್ನಾಟಕವನ್ನೂ ಭ್ರಷ್ಟಾಚಾರ ಮುಕ್ತಮಾಡಲು ನಮ್ಮ ನಾಯಕ ಅರವಿಂದ ಕೇಜ್ರಿವಾಲ್ ಅವರು ಇಚ್ಛೆಯಾಗಿದೆ. ದೆಹಲಿ ಹಾಗೂ ಪಂಜಾಬ ನ ಜನರು ಆಪ್ ಸಹಕಾರ ನೀಡಿ ಹೊಸ ಅಧ್ಯಾಯ ಬರೆದಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!