May 5, 2026
Tuesday, May 5, 2026
spot_img

ಬಿಜೆಪಿ ಪಿತೂರಿಯಿಂದ ಶೃಂಗೇರಿಯಲ್ಲಿ ವೋಟ್‌ ಚೋರಿ ಮಾಡಿದೆ: ಬಾಂಬ್‌ ಸಿಡಿಸಿದ ಸಿಎಂ ಸಿದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶೃಂಗೇರಿಯಲ್ಲಿ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಏನೋ ದೊಡ್ಡ ಪಿತೂರಿ ಮಾಡಿ ವೋಟ್‌ ಚೋರಿ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಬಾಂಬ್‌ ಸಿಡಿಸಿದ್ದಾರೆ.

ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ಬಿಜೆಪಿ ಮೇಲೆ ವೋಟ್‌ ಚೋರಿ ಆರೋಪ ಹೊರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋರ್ಟ್‌ ಆದೇಶದ ಮೇರೆಗೆ ಶೃಂಗೇರಿಯಲ್ಲಿ ಅಂಚೆ ಮತಗಳ ಮರು ಎಣಿಕೆ ಆಯಿತು. ರಾಜೇಗೌಡ ಕಳೆದ ವಿಧಾನಸಭೆಯಲ್ಲಿ 201 ಮತಗಳಿಂದ ಗೆದ್ದಿದ್ದರು. ರಾಜೇಗೌಡಗೆ ಇವಿಎಂ ನಲ್ಲಿ 59,171 ಮತ, 569 ಅಂಚೆಮತಗಳು ಬಂದಿತ್ತು, ಜೀವರಾಜ್ ಗೆ 58,970 ಇವಿಎಂ ಮತ, 692 ಮತ ಬಂದಿತ್ತು. ಒಟ್ಟಾರೆ 201 ಮತದಿಂದ ರಾಜೇಗೌಡ ಗೆದ್ದಿದ್ದರು.

ಇವೆಲ್ಲವೂ ಮೌಲ್ಯಯುತ ಮತ ಅಂತ ಚುನಾವಣಾ ಅಧಿಕಾರಿಗಳು, ಚುನಾವಣೆ ಏಜೆಂಟ್, ರಿಟರ್ನಿಂಗ್ ಅಧಿಕಾರಿಗಳು ಘೋಷಣೆ ಮಾಡಿದ್ರು. ಘೋಷಣೆ ಆದ ಮೇಲೆ ಬಿಜೆಪಿ ಅಭ್ಯರ್ಥಿ ಜೀವರಾಜ್ ಚುನಾವಣಾ ಅಕ್ರಮ ಆಗಿದೆ ಅಂತ ಹೈಕೋರ್ಟ್ ನಲ್ಲಿ ಮರು ಎಣಿಕೆಗೆ ಕೇಸ್ ಹಾಕಿದ್ರು. ಅವರ ಅರ್ಜಿ ಪುರಸ್ಕಾರ ಮಾಡಿ ಹೈಕೋರ್ಟ್ 2026ರ ಮಾರ್ಚ್‌ 6 ರಂದು ಮರು ಎಣಿಕೆಗೆ ಆದೇಶ ಮಾಡಿತ್ತು. 279 ಅಂಚೆ ಮತ ಎಣಿಕೆಗೆ ಆದೇಶ ಮಾಡಿತ್ತು ಎಂದು ಮಾಹಿತಿ ನೀಡಿದರು.


ಅದರಂತೆ ಮೇ 2 ರಂದು ಮತ ಮರುಎಣಿಕೆ ನಡೀತು. ಮರು ಎಣಿಕೆಯಲ್ಲಿ 314 ಮತಗಳು ಮಾತ್ರ ವ್ಯಾಲಿಡ್ ಆಗುತ್ತದೆ. ಅದರಲ್ಲಿ 255 ಮತ ಇನ್ ವ್ಯಾಲಿಡ್ ಆಯ್ತು. ಯಾಕೆ ಅ ಮತ ಇನ್ ವ್ಯಾಲಿಡ್ ಆಯ್ತು? 2023 ರಲ್ಲಿ ಜೀವರಾಜ್ ಗಡ 692 ಮತ ಬಿದ್ದಿತ್ತು. ಮರು ಎಣಿಕೆಯಲ್ಲಿ 690 ಮತ ಲಭಿಸಿದೆ. ಎರಡು ಮತ ಮಾತ್ರ ಕಡಿಮೆ ಆಗಿದೆ. ಇದನ್ನ ನೋಡಿದಾಗ ಸ್ಪಷ್ಟವಾಗಿ ಗೊತ್ತಾಗುತ್ತದೆ ಬಿಜೆಪಿಯವರು ಕ್ರಿಮಿನಲ್‌ ಪಿತೂರಿ ಮಾಡಿ ವೋಚ್‌ ಚೋರಿ ಮಾಡಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮತಪತ್ರಗಳನ್ನು ತಿದ್ದಿದೆ. ಅದರಲ್ಲಿರುವ ಇಂಕ್‌ನಲ್ಲಿಯೂ ವ್ಯತ್ಯಾಸ ಇರೋದು ಎದ್ದು ಕಾಣುತ್ತದೆ ಎಂದು ದೂರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !