ಚೊಚ್ಚಲ ಬಾರಿಗೆ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದ ಪೋಲಿಷ್ ತಾರೆ ಇಗಾ ಸ್ವಿಯಾಟೆಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಪೊಲೆಂಡ್‌ನ ಇಗಾ ಸ್ವಿಯಾಟೆಕ್ ಅವರು ಯುಎಸ್‌ ಓಪನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.
ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್ ಅವರು ಟ್ಯುನೀಶಿಯಾದ ಎದುರಾಳಿ ಓನ್ಸ್ ಜಬೇರ್ ಅವರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ತಮ್ಮ ಮೊದಲ ಯುಎಸ್ ಓಪನ್ ಚಾಂಪಿಯನ್‌ಶಿಪ್ ಹಾಗೂ ಒಟ್ಟಾರೆ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ನ್ಯೂಯಾರ್ಕ್‌ ನ ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪೋಲಿಷ್ ತಾರೆ ಸ್ವಿಯಾಟೆಕ್ ಐದನೇ ಶ್ರೇಯಾಂಕದ ಜಬೇರ್ ಅವರನ್ನು 6-2, 7-6 (7/5) ರಲ್ಲಿ ಮಣಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡರು. ಜೂನ್‌ನಲ್ಲಿ ನಡೆದಿದ್ದ ಫ್ರೆಂಚ್ ಓಪನ್‌ ಸಹ ಗೆದ್ದಿದ್ದ 21 ವರ್ಷದ ಸ್ವಿಯಾಟೆಕ್ ಪ್ರಸ್ತುತ ಯುಎಸ್‌ ಓಪನ್‌ ಸಹ ಗೆಲ್ಲುವ ಮೂಲಕ 2016 ರ ಬಳಿಕ ಒಂದೇ ಋತುವಿನಲ್ಲಿ ಎರಡು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸ್ವಿಯಾಟೆಕ್ ಅವರ ವೃತ್ತಿಜೀವನದ 10 ನೇ ಪ್ರಮುಖ ಪ್ರಶಸ್ತಿ ಇದಾಗಿದೆ. ಗಮನಾರ್ಹ ವಿಚಾರವೆಂದರೆ ಇಗಾ ತನ್ನ ಕೊನೆಯ 10 ಫೈನಲ್‌ಗಳಲ್ಲಿ ಒಂದು ಸೆಟ್ ಅನ್ನು ಕೈಬಿಡದೆ ಗೆದ್ದಿದ್ದಾರೆ. ಯುಎಸ್ ಚಾಂಪಿಯನ್‌ ಸ್ವಿಯಾಟೆಕ್ ಈ ಗೆಲುವಿಗಾಗಿ $2.6 ಮಿಲಿಯನ್ ಬಹುಮಾನದ ಹಣವನ್ನು ಗಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!