Friday, December 9, 2022

Latest Posts

ಐಸಿಸಿ ಟಿ 20 ವಿಶ್ವಕಪ್ 2022 ರ ಪ್ರಶಸ್ತಿ ವಿಜೇತರು, ಅತ್ಯುತ್ತಮ ಆಟಗಾರರ ವಿವಿರ ಇಲ್ಲಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ಯಲ್ಲಿ ನಡೆದ ಐಸಿಸಿ  ಟಿ 20 ವಿಶ್ವಕಪ್ 2022 ರ ಫೈನಲ್‌ ನಲ್ಲಿ ಜೋಸ್‌ ಬಟ್ಲರ್‌ ನೇತೃತ್ವದ ಇಂಗ್ಲೆಂಡ್‌ ತಂಡ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸುವುದರೊಂದಿಗೆ ವಿಶ್ವಕಪ್‌ ಗೆದ್ದುಕೊಂಡಿದೆ.
ಈ ವಿಶ್ವಕಪ್‌ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ಐಸಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಟಗಾರರು ಯಾರು, ಯಾವೆಲ್ಲಾ ಐಸಿಸಿ ಪ್ರಶಸ್ತಿ ಗೆದ್ದಿದ್ದಾರೆ ಎಂಬ ವಿವರ ಇಲ್ಲಿದೆ ನೋಡಿ.
ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕುರ್ರನ್ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೊತೆಗೆ ಟೂರ್ನಿಯುದ್ಧಕ್ಕೂ ತೋರಿದ ಅದ್ಧೂರಿ ಪ್ರದರ್ಶನಕ್ಕೆ ಅವರಿಗೆ   ಸರಣಿಶ್ರೇಷ್ಠ ಪ್ರಶಸ್ತಿ ಕೂಡ ಒಲಿದುಬಂತು. ಈ ಮೂಲಕ ಕರನ್ ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಸರಣಿಶ್ರೇಷ್ಠ ಪಡೆದ ಮೊಟ್ಟ ಮೊದಲ ಬೌಲರ್ ಎಂದ ಅಪರೂಪದ ಸಾಧನೆಗೆ ಪಾತ್ರವಾದರು. ಇವರು ಟೂರ್ನಿಯಲ್ಲಿ ಒಟ್ಟು 13 ವಿಕೆಟ್ ಕಲೆಹಾಕಿದ್ದಾರೆ.
ಇನ್ನು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಸಾಧನೆಯನ್ನು ಭಾರತದ ವಿರಾಟ್ ಕೊಹ್ಲಿ ಮಾಡಿದ್ದಾರೆ. ಬರೋಬ್ಬರಿ 296 ಕಲೆಹಾಕುವ ಮೂಲಕ ಕೊಹ್ಲಿ ಟಿ 20 ವಿಶ್ವಕಪ್‌ ಇತಿಹಾಸದಲ್ಲಿ ಎರಡು ಬಾರಿ ಅತಿಹೆಚ್ಚು ರನ್‌ ಕಲೆಹಾಕಿದ ವಿಶ್ವದ ಏಕೈಕ ಬ್ಯಾಟ್ಸ್‌ ಮನ್‌ ಎಂಬ ದಾಖಲೆ ಬರೆದಿದ್ದಾರೆ. ಮತ್ತೊಬ್ಬ ಭಾರತೀಯ ಸೂರ್ಯಕುಮಾರ್‌ (239) ಅತಿಹೆಚ್ಚು ರನ್‌ ಕಲೆಹಾಕಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಹೆಚ್ಚಿನ 50-ಪ್ಲಸ್ ಸ್ಕೋರ್‌ಗಳು ಗಳಿಸಿದ ದಾಖಲೆ ಸಹ ವಿರಾಟ್ ಕೊಹ್ಲಿ (4) ಬಳಿಯೇ ಇದೆ. ಇನ್ನು ನ್ಯೂಜಿಲೆಂಡ್‌ ನ ಗ್ಲೆನ್ ಫಿಲಿಪ್ಸ್ ಹಾಗೂ ಸೌತ್‌ ಆಫ್ರಿಕಾದ ರಿಲೀ ರೋಸ್ಸೌ ತಲಾ ಒಂದು ಶತಕಗಳ ಸಾಧಕರಾಗಿದ್ದಾರೆ. ಬರೋಬ್ಬರಿ 11 ಸಿಕ್ಸರ್‌ ಸಿಡಿಸುವ ಮೂಲಕ ಜಿಂಬಾಂಬ್ವೆಯ ಸಿಕಂದರ್ ರಜಾ ಅತಿಹೆಚ್ಚು ಸಿಕ್ಸರ್‌ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಸೂರ್ಯ ಅತಿಹೆಚ್ಚು (26) ಬೌಂಡರಿ ಸಿಡಿಸಿದ್ದಾರೆ. ಶ್ರೀಲಂಕಾದ ಸ್ಟಾರ್‌ ಸ್ಪಿನ್ನರ್‌ ವನಿಂದು ಹಸರಂಗ 15 ಕಬಳಿಸುವ ಮೂಲಕ ಟೂರ್ನಿಯ ಅತಿಹೆಚ್ಚು ವಿಕೆಟ್‌ ಕಬಳಿಸಿದ ಸರಧಾರನಾಗಿ ಮೂಡಿಬಂದಿದ್ದಾರೆ. ಭಾರತದ ವೇಗಿ ಭುವನೇಶ್ವರ್ ಕುಮಾರ್ (3) ಹೆಚ್ಚಿನ ಮೇಡನ್‌ಗಳನ್ನು ಎಸೆದ ಸಾಧನೆ ಬರೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!