August 10, 2026
Monday, August 10, 2026
spot_img

ಆದಾಯ ತೆರಿಗೆ ಅಧಿಕಾರಿಯಾದ ಟಬು: ದುನಿಯಾ ವಿಜಯ್ ಸಿನಿಮಾದಲ್ಲಿ ‘ಗೌರಿ’ಯಾಗಿ ಹೊಸ ಅವತಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಬು ಸಿನಿಮಾದಲ್ಲಿ ಇದ್ದಾರೆ ಅಂದಮೇಲೆ ಪಾತ್ರದ ಮೇಲೆ ನಿರೀಕ್ಷೆ ಇರುವುದು ಸಹಜ. ಆದರೆ ಈ ಬಾರಿ ಅವರು ಕಾಣಿಸಿಕೊಳ್ಳುತ್ತಿರುವ ಅವತಾರ ಮಾತ್ರ ಕೊಂಚ ವಿಭಿನ್ನವಾಗಿದೆ. ವಿಜಯ್ ಸೇತುಪತಿ ಮತ್ತು ದುನಿಯಾ ವಿಜಯ್ ಅಭಿನಯದ ‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ಸಿನಿಮಾದಲ್ಲಿ ಟಬು ಖಡಕ್ ಅಧಿಕಾರಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದೀಗ ಅವರ ಪಾತ್ರದ ಹೊಸ ಝಲಕ್ ಹೊರಬಂದಿದ್ದು, ಟಬು ಅವರ ಲುಕ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಟಬುಗೆ ಪವರ್‌ಫುಲ್ ಅಧಿಕಾರಿ ಪಾತ್ರ

ಪೂರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾದಲ್ಲಿ ಟಬು ಅವರು ಗೌರಿ ಹೆಗ್ಡೆ ಎಂಬ ಆದಾಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಪಾತ್ರ ನಿರ್ವಹಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ಹೊಂದಿರುವ ಅಧಿಕಾರಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಲುಕ್ ಕೂಡ ಸಾಕಷ್ಟು ರಗಡ್ ಆಗಿದ್ದು, ಟಬು ಅವರ ಆ್ಯಕ್ಷನ್ ಅವತಾರ ಗಮನ ಸೆಳೆಯುತ್ತಿದೆ.

ಕನ್ನಡದಲ್ಲೂ ಬರಲಿದೆ ಸಿನಿಮಾ

‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಕನ್ನಡ ಸಿನಿಪ್ರೇಕ್ಷಕರಿಗೂ ಈ ಬಹುಭಾಷಾ ಸಿನಿಮಾವನ್ನು ನೋಡುವ ಅವಕಾಶ ಸಿಗಲಿದೆ.

ಇದನ್ನೂ ಓದಿ:

ದೊಡ್ಡ ತಾರಾಬಳಗ

ಚಿತ್ರದಲ್ಲಿ ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಂಡರೆ, ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಯುಕ್ತ ನಾಯಕಿಯಾಗಿ ನಟಿಸಿದ್ದು, ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ.

ಬಿಡುಗಡೆಗೆ ಕಾಯ್ತಿರೋ ಅಭಿಮಾನಿಗಳು

ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರಕ್ಕೆ ಹರ್ಷವರ್ಧನ್ ರಾಮೇಶ್ವರ್ ಸಂಗೀತ ನೀಡಿದ್ದಾರೆ. ಪೂರಿ ಜಗನ್ನಾಥ್, ಚಾರ್ಮಿ ಕೌರ್ ಮತ್ತು ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲ ಚಿತ್ರ ನಿರ್ಮಿಸಿದ್ದಾರೆ. ಬಿಡುಗಡೆಯ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದ್ದು, ಟಬು ಅವರ ವಿಭಿನ್ನ ಪಾತ್ರ ಸಿನಿಮಾದ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !