Saturday, July 2, 2022

Latest Posts

ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್‌ ಸ್ಫೋಟ: 10ಕ್ಕೂ ಅಧಿಕ ಸಾವು, ಹೊಣೆಹೊತ್ತ ತಾಲಿಬಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಅಫ್ಘಾನಿಸ್ತಾನದ ಉತ್ತರ ನಗರ ಮಜರ್-ಇ-ಶರೀಫ್‌ನ ಶಿಯಾ ಮಸೀದಿಯಲ್ಲಿ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದು, ೧೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 65 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಟೂಲೂ ನ್ಯೂಸ್ ವರದಿ ಪ್ರಕಾರ, ಉತ್ತರ ಅಫ್ಘಾನ್ ನಗರದ ಶಿಯಾ ಪಂಗಡದ ಮಝಾರ್ ಇ ಷರೀಫ್ ಮಸೀದಿ ಮೇಲೆ ಬಾಂಬ್ ದಾಳಿ ನಡೆಸಿದ್ದ ಹೊಣೆಯನ್ನುತಾಲಿಬಾನ್ ಹೊತ್ತುಕೊಂಡಿದೆ.
ಮೃತರು ಮತ್ತು ಗಾಯಗೊಂಡವರನ್ನ ಆಂಬ್ಯುಲೆನ್ಸ್ ಮತ್ತು ಖಾಸಗಿ ಕಾರುಗಳಲ್ಲಿ ಕರೆತರಲಾಗಿದೆ ಎಂದು ಮಜರ್-ಇ-ಶರೀಫ್‌ನ ಮುಖ್ಯ ಆಸ್ಪತ್ರೆಯ ಮುಖ್ಯಸ್ಥ ಡಾ.ಘೌಸುದ್ದೀನ್ ಅನ್ವರಿ ಹೇಳಿದ್ದಾರೆ. ಉತ್ತರ ಮಜರ್-ಎ-ಶರೀಫ್‌ನ ಸಾಯಿ ಡೋಕೆನ್ ಮಸೀದಿಯಲ್ಲಿ ಮುಸ್ಲಿಮರು ಪವಿತ್ರ ರಂಜಾನ್ ಮಾಸವನ್ನ ಆಚರಿಸುತ್ತಿದ್ದು, ಭಕ್ತರು ಪ್ರಾರ್ಥನೆಗೆ ಕುಳಿತಾಗ ಸ್ಫೋಟ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ಶಿಯಾ ಮಸೀದಿಯೊಳಗೆ ಸಂಭವಿಸಿರುವ ಬಾಂಬ್ ಸ್ಫೋಟದಲ್ಲಿ 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವುದಾಗಿ ತಾಲಿಬಾನ್ ಕಮಾಂಡರ್ ನ ವಕ್ತಾರ ಮೊಹಮ್ಮದ್ ಅಸೀಫ್ ವಾಝೇರಿ ನ್ಯೂಸ್ ಏಜೆನ್ಸಿ ರಾಯಿಟರ್ಸ್ ಗೆ ತಿಳಿಸಿರುವುದಾಗಿ ವರದಿ ಹೇಳಿದೆ.
ಪ್ರಾಂತೀಯ ಆರೋಗ್ಯ ಮಂಡಳಿಯ ವಕ್ತಾರ ಝಿಯಾ ಝೆಂಡಾನಿ ಅವರು, ಸ್ಫೋಟದಲ್ಲಿ ಐದಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss