Monday, August 8, 2022

Latest Posts

ಲಕ್ನೋಗೆ ತೆರಳಬೇಕಿದ್ದ ಯುಪಿ ಸಿಎಂ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಇಂದು (ಭಾನುವಾರ) ವಾರಾಣಸಿಯಲ್ಲಿ ಪಕ್ಷಿ ಡಿಕ್ಕಿ ಹೊಡೆದಿದ್ದರಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ. ಲಖನೌಗೆ ತೆರಳುತ್ತಿದ್ದ ಸಿಎಂ ಯೋಗಿ ವಾರಾಣಸಿಯ ಸರ್ಕ್ಯೂಟ್ ಹೌಸ್ ನಿಂದ ಬೆಳಗ್ಗೆ 8.55ರ ಸುಮಾರಿಗೆ ನಿರ್ಗಮಿಸಿದರು. ಅವರ ಹೆಲಿಕಾಪ್ಟರ್ ಬೆಳಗ್ಗೆ 9.10 ರ ಸುಮಾರಿಗೆ ಪೊಲೀಸ್ ಲೈನ್ ಹೆಲಿಪ್ಯಾಡ್‌ನಿಂದ ಹೊರಟು ಮತ್ತೆ ವಾಪಸ್‌ 9.16 ಕ್ಕೆ ತುರ್ತು ಭೂಸ್ಪರ್ಶ ಮಾಡಿದೆ.

ಘಟನೆಯ ನಂತರ, ಯುಪಿ ಸಿಎಂ ಬೆಳಿಗ್ಗೆ 9.20 ರ ಸುಮಾರಿಗೆ ಸರ್ಕ್ಯೂಟ್ ಹೌಸ್‌ಗೆ ಮರಳಿ, ಅಲ್ಲಿಂದ ಬಬತ್‌ಪುರ ವಿಮಾನ ನಿಲ್ದಾಣಕ್ಕೆ ರಸ್ತೆ ಮಾರ್ಗದಲ್ಲಿ ತೆರಳಿದ್ರು. ರಾಜ್ಯದ ವಿಮಾನದ ಮೂಲಕ ಲಖನೌಗೆ ತೆರಳಲಿದ್ದಾರೆ. ಅವರ ಪ್ರಯಾಣಕ್ಕೆ ಆಡಳಿತ ಸಕಲ ವ್ಯವಸ್ಥೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss