September 27, 2026
Sunday, September 27, 2026
spot_img

ಮಂಗಳೂರಿಗೆ ಆಗಮಿಸಿದ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಇಂದು ಕೊಲ್ಲೂರು ಮೂಕಾಂಬಿಕೆಯ ದರುಶನ ಪಡೆಯಲಿದ್ದಾರೆ. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ‌ಸಚಿವ ಖಾದರ್ ಸ್ವಾಗತ ಕೋರಿದ್ದಾರೆ.

ಮಧ್ಯಾಹ್ನ 1:40 ರ ಸುಮಾರಿಗೆ ವಿಜಯ್‌ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದರು. ವಿಮಾನ ನಿಲ್ದಾಣದಿಂದ ಹೊರಕ್ಕೆ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ಮುತ್ತಿದ್ದಾರೆ. ಕರ್ನಾಟಕದಲ್ಲಿಯೂ ಸಿಗುತ್ತಿರುವ ಪ್ರೀತಿ ಕಂಡು ವಿಜಯ್‌ ಖುಷಿಯಾಗಿದ್ದಾರೆ. ನಗುಮುಖದಿಂದ ಉಡುಪಿಯತ್ತ ಹೊರಟಿದ್ದು, ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

ಕೊಲ್ಲೂರು ಮೂಕಾಂಬಿಕೆಯ ದರುಶನ ಹಾಗೂ ವಿಶೇಷ ಪೂಜೆಯನ್ನು ವಿಜಯ್‌ ಮಾಡಿಸಲಿದ್ದಾರೆ. ಸುತ್ತ ಮುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ತಮಿಳುನಾಡು ಹಾಗೂ ಉಡುಪಿ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ.

Must Read