Thursday, September 29, 2022

Latest Posts

ಯುನಿಕಾರ್ನ್‌ ಕ್ಲಬ್‌ ಸೇರಿದ ಟಾಟಾ 1mg:‌ ಕಂಪನಿಯ ಮೌಲ್ಯವೆಷ್ಟಿದೆ ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟಾಟಾ ಟಿಜಿಟಲ್‌ ನ ಆನ್‌ಲೈನ್ ಹೆಲ್ತ್‌ಟೆಕ್ ಪ್ಲಾಟ್‌ಫಾರ್ಮ್ 1mgಯು ಯುನಿಕಾರ್ನ್‌ ಆಗಿ ಮಾರ್ಪಟ್ಟಿದೆ. ವರದಿಗಳ ಪ್ರಕಾರ ಕಂಪನಿಯು ಇದೀಗ 1.25 ಮತ್ತು 1.30 ಶತಕೋಟಿ ಡಾಲರ್‌ ಗಳಷ್ಟು ಮೌಲ್ಯಮಾಪನ ಹೊಂದಿದೆ ಎನ್ನಲಾಗಿದೆ.

ಯುನಿಕಾರ್ನ್‌ ಗಳೆಂದರೆ 1ಬಿಲಿಯನ್‌ ಡಾಲರ್‌ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಖಾಸಗಿ ಒಡೆತನದ ಕಂಪನಿಗಳಾಗಿವೆ.

ಟಾಟಾ ಒಡೆತನದ 1mg ಇದುವರೆಗೆ 16 ನಿಧಿಸಂಗ್ರಹ ಸುತ್ತುಗಳಲ್ಲಿ 230.8 ಮಿಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸಿದೆ.

1mgಯು ಟಾಟಾಗಳ ಇ-ಕಾಮರ್ಸ್‌ ವಿಭಾಗದಲ್ಲಿ ಯುನಿಕಾರ್ನ್‌ ಆಗಿ ಹೊರಹೊಮ್ಮಿದ ಮೂರನೇ ಕಂಪನಿಯಾಗಿದ್ದು ಈ ಹಿಂದೆ ಟಾಟಾ ಒಡೆತನದ ಬಿಗ್‌ ಬಾಸ್ಕೆಟ್‌ ಮತ್ತು ಮುಕೇಶ್‌ ಬನ್ಸಾಲ್‌ ಅವರ ಕಲ್ಟ್ ಫಿಟ್‌ ಗಳು 1ಬಿಲಿಯನ್‌ ಡಾಲರ್‌ ಮೌಲ್ಯಕ್ಕೆ ಏರಿಕೆಯಾಗಿದ್ದವು.

ಟಾಟಾ ಸನ್ಸ್‌ನ ವಾರ್ಷಿಕ ವರದಿಯ ಪ್ರಕಾರ, ಟಾಟಾ ಡಿಜಿಟಲ್ ತನ್ನ ಡಿಜಿಟಲ್ ಆರೋಗ್ಯ ಕಂಪನಿಯಾದ 1mg ನಲ್ಲಿ ಬಹುಪಾಲು ಪಾಲನ್ನು ಹೂಡಿಕೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!