Wednesday, November 30, 2022

Latest Posts

ಕಂದಕಕ್ಕೆ ಉರುಳಿಬಿದ್ದ ಟಾಟಾ ಸುಮೋ, ಎಂಟು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಪ್ರದೇಶದಲ್ಲಿ ಕಾರು ಕಂದಕಕ್ಕೆ ಉರುಳಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಕಿಶ್ತ್ವಾರ್‌ನ ಮಾರ್ವಾ ಪ್ರದೇಶದಲ್ಲಿ ಟಾಟಾ ಸುಮೋ ಆಳವಾದ ಕಂದಕಕ್ಕೆ ಬಿದ್ದಿದೆ. ನಿಯಂತ್ರಣ ತಪ್ಪಿ ಕಂದಕಕ್ಕೆ ಕಾರು ಉರುಳಿದ್ದು, ಕಾರಿನಲ್ಲಿದ್ದ ಎಂಟೂ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೊಹಮ್ಮದ್ ಆಮೀನ್ ಶೇಖ್, ಉಮರ್ ಗನಿ ಶಾ, ಮೊಹಮದ್ ಇರ್ಫಾನ್ ಹಜಾಮ್, ಅಫಕ್ ಅಹ್ಮದ್ ಹಜಾಮ್, ಸಫೋರಾ ಬಾನೋ, ಮುಝಾಮಿಲಾ ಬಾನೋ ಮತ್ತು ಆಸಿಯಾ ಬಾನು ಮೃತರು. ಮೃತರಲ್ಲಿ ಇನ್ನೊಬ್ಬರ ಮಾಹಿತ ಇನ್ನೂ ದೊರಕಿಲ್ಲ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ಅವರು ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ್ದು,ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!