ಹೊಸದಿಗಂತ ವರದಿ ವಿಜಯಪುರ:
ಮಕ್ಕಳಿಗೆ ಸರ್ಕಾರ ಕೊಡುವ ಆಹಾರ ಪದಾರ್ಥಗಳನ್ನೂ ಬಿಡಲ್ವಲ್ರಿ. ಖಳ್ಳರು, ಖದೀಮರು ಬೇರೆ ಯಾರಾದರೂ ಕದಿಯುತ್ತಾರೆ ಅಂತಾದರೆ ಆಶ್ಚರ್ಯಪಡಬೇಕಿಲ್ಲ. ಆದರೆ, ಅಲ್ಲಿ ಮಕ್ಕಳಿಗೆ ತಿದ್ದಿ ತೀಡಿ ಬುದ್ದಿ ಹೇಳಬೇಕಾದ ಶಿಕ್ಷಕಿಯೇ ಕಳ್ಳಿಯಾದರೆ ಏನು ಮಾಡೋದು? ಹೌದು. ಇಂತದ್ದೊಂದು ಘಟನೆ ನಡೆದಿದೆ.
ಅಂಗನವಾಡಿ ಆಹಾರ ಪದಾರ್ಥ ಕಳ್ಳಸಾಗಣೆ ಮಾಡುತ್ತಿದ್ದ ಶಿಕ್ಷಕಿಯೊಬ್ಬಳು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ.
ಪದ್ಮಾ ಮ್ಯಾಗೇರಿ ಸಿಕ್ಕಿಬಿದ್ದಿರುವ ಶಿಕ್ಷಕಿ. ಗಣಿಹಾರ ಗ್ರಾಮದ ಅಂಗನವಾಡಿಯಲ್ಲಿರುವ ವಿವಿಧ ಆಹಾರ ಪದಾರ್ಥಗಳನ್ನು ಕಳ್ಳಸಾಗಣೆ ಮಾಡುವಾಗ ಸ್ಥಳೀಯರು ಆಹಾರ ಪದಾರ್ಥ ಸಮೇತ ಹಿಡಿದಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.