ಇಬ್ಬರು ಮಹಾಪುರುಷರ ಕನಸನ್ನು ನಾವಿಂದು ನನಸು ಮಾಡಿದ್ದೇವೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಧಿಕೃತವಾಗಿ ಇಂದು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟಿಸಿದರು. ಬಳಿಕ ತಾಯಿ ಭುವನೇಶ್ವರಿಗೆ ನಮನಗಳನ್ನು ಸಲ್ಲಿಸುತ್ತಾ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಇಬ್ಬರು ಮಹಾಪುರುಷರ ಕಂಡ ಕನಸನ್ನು ನಾವಿಂದು ನನಸು ಮಾಡುತ್ತಿದ್ದೇವೆ ಎಂದರು. ವಿಶ್ವೇಶ್ವರಯ್ಯ, ಕೃಷ್ಣರಾಜ ಒಡೆಯರ್‌ ಕಂಡ ಕನಸು ಇಂದು ನನಸಾಗುತ್ತಿದೆ. ಈ ಇಬ್ಬರು ಮಹಾಪುರುಷರು ನಾಡಿಗೆ ಕೊಟ್ಟ ಕೊಡುಗೆ ಅಪಾರ ಎಂದರು.

ಕಳೆದ ಕೆಲವು ದಿನಗಳಿಂದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಮ್ಮ ರಾಷ್ಟ್ರದ ಬೆಳವಣಿಗೆಯನ್ನು ನೋಡುವುದರಲ್ಲಿ ಯುವಕರು ಅಪಾರ ಹೆಮ್ಮೆ ಪಡುತ್ತಿದ್ದಾರೆ. ಈ ಎಲ್ಲಾ ಯೋಜನೆಗಳು ಸಮೃದ್ಧಿ ಮತ್ತು ಅಭಿವೃದ್ಧಿಯ ಹಾದಿಗಳನ್ನು ತೆರೆಯುತ್ತದೆ.

ಬೆಂಗಳೂರು ಮತ್ತು ಮೈಸೂರು ಕರ್ನಾಟಕದ ಪ್ರಮುಖ ನಗರಗಳು. ಒಂದು ತಂತ್ರಜ್ಞಾನಕ್ಕೆ ಹೆಸರಾದರೆ ಇನ್ನೊಂದು ಸಂಪ್ರದಾಯಕ್ಕೆ ಹೆಸರುವಾಸಿ. ಎರಡೂ ನಗರಗಳನ್ನು ತಂತ್ರಜ್ಞಾನದ ಮೂಲಕ ಸಂಪರ್ಕಿಸುವುದು ಬಹಳ ಮಹತ್ವದ್ದಾಗಿದೆ. ಈ ಹೆದ್ದಾರಿ ಎರಡು ನಗರಗಳ ಅಭಿವೃದ್ಧಿಗೆ ರಹದಾರಿ. ದಶಕಗಳಿಂದ ಉಭಯ ನಗರಗಳ ಪ್ರಯಾಣಿಕರಿಗೆ ಟ್ರಾಫಿಕ್‌ ಸಮಸ್ಯೆ ಕಾಡಿತ್ತು. ಹೈವೇ ಉದ್ಘಾಟನೆಯಿಂದ ದಾರಿ ದೀಪ ಸಿಕ್ಕಂತಾಗಿದೆ. ಈ ಹೆದ್ದಾರಿ ರಾಮನಗರ-ಮಂಡ್ಯ ಜಿಲ್ಲೆಗಳ ಮೂಲಕವೂ ಹಾದು ಹೋಗಲಿದ್ದು, ಆಯಾ ಜಿಲ್ಲೆಗಳ ಪರಂಪರೆಯನ್ನು ಕೂಡಾ ಎತ್ತಿ ಹಿಡಿಯಲಿದೆ.

ಮಳೆಗಾದಲ್ಲಿ ಹೆದ್ದಾರಿಯಲ್ಲಿ ಸದಾ ಭೂಕುಸಿತದಿಂದ ಜನ ಕಂಗೆಟ್ಟಿದ್ದರು ಕುಶಾಲನಗರ ಹೈವೇಯಿಂದಾಗಿ ಈ ಸಮಸಯೆಗೆ ಪರಿಹಾರ ಸಿಕ್ಕಿದೆ. ಮಳಾ ಬಂದಾಗಲೆಲ್ಲಾ ಬೆಂಗಳೂರು-ಮಂಗಳೂರು ರಸ್ತೆ ಬಂದ್‌ ಆಗುತ್ತಿತು. ಇದೀಗ ಎಲ್ಲಾ ಸಮಸ್ಯೆಗಳಿಗೂ ಬ್ರೇಕ್‌ ಬೀಳಲಿದೆ.

2014ರ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಬಡವರನ್ನು ಹಾಳು ಮಾಡದೆ ಬಿಡಲಿಲ್ಲ. ಬಡವರಿಗಾಗಿ ಇದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿದೆ ಎಂದು ಕಾಂಗ್ರೆಸ್‌ ಅನ್ನು ಟೀಕಿಸಿತು. ಬಳಿಕ ಬಡವರ ಸೇವೆ ಮಾಡಲು ಜನ ನಮಗೆ ಅವಕಾಶ ಕೊಟ್ಟಿದ್ದಕ್ಕೆ ಪ್ರತಿ ಮನೆಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ 3 ಕೋಟಿಗೂ ಹೆಚ್ಚು ಬಡವರಿಗೆ ಮನೆಗಳನ್ನು ನಿರ್ಮಿಸಲಾಗಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕದ 40 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಕೂಡ ನೀಡಲಾಗಿದೆ.

2022ರಲ್ಲಿ ಭಾರತವು ದಾಖಲೆಯ ಹೂಡಿಕೆಯನ್ನು ಪಡೆಯಿತು. ಕೋವಿಡ್ ನಡುವೆಯೂ ಕರ್ನಾಟಕದಲ್ಲಿ 4 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗಿದೆ. ಐಟಿ ಮಾತ್ರವಲ್ಲ ಬಯೋಟೆಕ್ನಾಲಜಿಯಲ್ಲೂ ರಾಜ್ಯ ಮುಂದಿದ್ದು, ಎಲೆಕ್ಟ್ರಿಕ್‌ ವಾಹನ ತಯಾರಿಕೆಯಲ್ಲಿ ಕರ್ನಾಟಕ ಸ್ಥಾನವನ್ನು ಉಳಿಸಿಕೊಂಡಿದೆ ಎಂದರು.

‘ಮೋದಿಯ ಸಮಾಧಿ ತೋಡುವ’ ಕನಸು ಕಾಣುತ್ತಿದೆ ಕಾಂಗ್ರೆಸ್. ಕಾಂಗ್ರೆಸ್ ‘ಮೋದಿಯ ಸಮಾಧಿ ತೋಡುವಲ್ಲಿ’ ನಿರತವಾಗಿದ್ದರೆ, ಮೋದಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮತ್ತು ಬಡವರ ಬದುಕನ್ನು ಸುಗಮಗೊಳಿಸುವಲ್ಲಿ ನಿರತರಾಗಿದ್ದಾರೆ ದೇಶದ ಪರತಿಯೊಬ್ಬರ ಆಶೀರ್ವಾದ ಮೋದಿಯ ರಕ್ಷಾಕವಚ ಎಂದು ಅವರಿಗೆ ತಿಳಿದಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್‌ ನೀಡಿದರು.

ಡಬಲ್‌ ಇಂಜಿನ್‌ ಸರ್ಕಾರದ ಲಾಭ ಕರ್ನಾಟಕದ ಜನತೆಗೆ ಸಿಕ್ಕಿದೆ. 3 ಲಕ್ಷಕ್ಕೂ ಹೆಚ್ಚು ರೈತರಿಗೆ 600 ಕೋಟಿಗೂ ಹೆಚ್ಚು ಹಣ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಜೊತೆಗೆ ಕೈ ಜೋಡಿಸಿ ರಾಜ್ಯದ ರೈತರ ಪರವಾಗಿ ಬೊಮ್ಮಾಯಿ ಸರ್ಕಾರಕ್ಕೆ ನಿಂತಿದ್ದಕ್ಕೆ ಧನ್ಯವಾದ ತಿಳಿಸುತ್ತೇನೆ. ಈ ಬಾರಿ ಬಜೆಟ್‌ನಲ್ಲಿ ಕಬ್ಬು ಬೆಳೆಗಾರರಿಗೆ ಹಲವು ಯೋಜನೆಗಳನ್ನು ಘೋಷಿಸಿರುವುದಾಗಿ ಪ್ರಧಾನಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!