April 29, 2026
Wednesday, April 29, 2026
spot_img

ಬಹುನಿರೀಕ್ಷಿತ ‘ದೃಶ್ಯಂ 3’ ಚಿತ್ರದ ಟೀಸರ್ ರಿಲೀಸ್‌: ಮತ್ತೆ ಕ್ರೈಮ್ ಥ್ರಿಲ್ಲರ್ ಮೂಲಕ ಬರುತ್ತಿದ್ದಾರೆ ಜಾರ್ಜ್‌ಕುಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾದ ತೆರೆಗೆ ಬರಲು ಸಜ್ಜಾಗಿದೆ. ಈ ಬಾರಿ ಮೋಹನ್‌ಲಾಲ್ ಅವರ ಜಾರ್ಜ್‌ಕುಟ್ಟಿ ಪಾತ್ರ ವಿಭಿನ್ನವಾಗಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಸುಮಾರು 1 ನಿಮಿಷ 50 ಸೆಕೆಂಡ್‌ಗಳ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಈ ಹಿಂದಿನ ಎರಡು ಭಾಗಗಳ ಕ್ಲೈಮ್ಯಾಕ್ಸ್ ದೃಶ್ಯಗಳ ಜೊತೆಗೆ ಮುಂದಿನ ಭಾಗಕ್ಕೆ ಎಂಟ್ರಿಯಾಗಲಿದ್ದು,ಇಲ್ಲಿ ಜಾರ್ಜ್ ಕುಟ್ಟಿ ಚರ್ಚ್ ಒಂದರಲ್ಲಿ ಏಸು ಕ್ರಿಸ್ತನ ಮೂರ್ತಿಯೆದುರು ಮಂಡಿಯೂರಿ ಕೂತಿರುವ ದೃಶ್ಯ ತೋರಿಸಲಾಗಿದೆ.

ಇದೀಗ ಜೀತು ಜೋಸೆಫ್ ನಿರ್ದೇಶನದ ಈ ಸಿನಿಮಾ 2026ರ ಮೇ 21ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿದೆ. ಮತ್ತೊಮ್ಮೆ ಕ್ರೈಮ್ ಥ್ರಿಲ್ಲರ್ ಮೂಲಕ ಅಭಿಮಾನಿಗಳನ್ನು ತನ್ನತ್ತ ಸೆಳೆಯಲಿದೆ. ಸಿನಿಮಾನಲ್ಲಿ ಮೋಹನ್​​ಲಾಲ್ ಜೊತೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ಧಿಕ್ ಇನ್ನೂ ಹಲವರು ನಟಿಸಿದ್ದಾರೆ.

ಈ ಸಿನಿಮಾದ ಮೊದಲ ಭಾಗ 2013ರಲ್ಲಿ, ಎರಡನೇ ಭಾಗ 2021ರಲ್ಲಿ ತೆರೆಕಂಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !