ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತ್ಯಂತ ಭ್ರಷ್ಟ ರಾಜಕಾರಣಿ ಎಂದರೆ ಅದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ತೆಲಂಗಾಣ ಚುನಾವಣೆ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು , ಆಡಳಿತಾರೂಢ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಪಕ್ಷವು ಮದ್ಯ ಹಗರಣ, ಕಾಳೇಶ್ವರಂ ಯೋಜನೆ, ಹೈದರಾಬಾದ್‌ನ ಮಿಯಾಪುರ್‌ನಲ್ಲಿ ನಡೆಸಲಾದ ಭೂ ಅವ್ಯವಹಾರಗಳು ಸೇರಿದಂತೆ ವಿವಿಧ ಹಗರಣಗಳಲ್ಲಿ ಭಾಗಿಯಾಗಿದೆ ಎಂದರು.
ಕೆ.ಸಿ ರಾವ್ ದೇಶದ ಅತ್ಯಂತ ಭ್ರಷ್ಟ ರಾಜಕಾರಣಿದ್ದು, ಅವರು ಭಾಗಿಯಾಗಿರುವ ಎಲ್ಲಾ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ಭ್ರಷ್ಟಚಾರದಲ್ಲಿ ತೊಡಗಿರುವವರನ್ನು ಬಿಜೆಪಿ ಜೈಲಿಗೆ ಕಳುಹಿಸುತ್ತದೆ ಎಂದು ಶಾ ಹೇಳಿದ್ದಾರೆ.
ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲಾಗುವುದು. ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಕಾಳೇಶ್ವರಂ ಮತ್ತು ಧರಣೆ ಯೋಜನೆಗಳಲ್ಲಿ ನಡೆಸಲಾದ ಹಗರಣ ಕುರಿತು ತನಿಖೆ ನಡೆಸಲಾಗವುದು. ಅಯೋಧ್ಯಾಯ ರಾಮಮಂದಿರಕ್ಕೆ ಉಚಿತವಾಗಿ ಪ್ರವಾಸ ಏರ್ಪಡಿಸಲಾಗುವುದು’ ಎಂದು ಶಾ ಭರವಸೆ ನೀಡಿದರು.