Saturday, February 4, 2023

Latest Posts

ದೆಹಲಿಯಲ್ಲಿ ಬಿಆರ್‌ಎಸ್ ಕಚೇರಿ ಉದ್ಘಾಟನೆ ಮಾಡಿದ ಕೆಸಿಆರ್: ಅಖಿಲೇಶ್ ಯಾದವ್, ಕುಮಾರಸ್ವಾಮಿ ಹಾಜರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ರಾಜಕಾರಣದಲ್ಲಿ ಗುಣಾತ್ಮಕ ಬದಲಾವಣೆ ತರಲು ಸಂಕಲ್ಪ ಮಾಡಿರುವ ಸಿಎಂ ಕೆಸಿಆರ್ ಅಂದುಕೊಂಡಿದ್ದನ್ನು ಸಾಧಿಸಲು ದೆಹಲಿಯಲ್ಲಿ ಬಿಆರ್‌ಎಸ್ ಪಕ್ಷದ ಕಚೇರಿ ಉದ್ಘಾಟನೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ದೆಹಲಿಯಲ್ಲಿ ಯಾಗ, ಪೂಜೆ ಬಳಿಕ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್ ) ಕಚೇರಿ ಉದ್ಘಾಟಿಸಿದರು.

ಸಮಾಜವಾದಿ ಪಕ್ಷದ ನಾಯಕ, ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್, ಕರ್ನಾಟಕದ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ಹಲವು ರಾಜಕೀಯ ಮುಖಂಡರು, ಹರಿಯಾಣ, ಪಂಜಾಬ್, ಯುಪಿ ಮತ್ತು ಬಿಹಾರದ ರೈತ ಸಂಘಗಳ ಮುಖಂಡರು ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಕೆಸಿಆರ್ ಅವರನ್ನು ಅಭಿನಂದಿಸಿದ್ದಾರೆ. ತಮಿಳುನಾಡಿನ ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ಸಂಸದ ಚಿದಂಬರಂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಆರ್‌ಎಸ್ ಪಕ್ಷದ ಶಾಸಕರು, ಎಂಎಲ್‌ಸಿಗಳು, ಸಂಸದರು ಮತ್ತು ಇತರ ಮುಖಂಡರು ಭಾಗವಹಿಸಿದ್ದರು.

ಬಿಆರ್ ಎಸ್ ಪಕ್ಷದ ಕಚೇರಿ ಉದ್ಘಾಟನೆಗೂ ಮುನ್ನ ಸಿಎಂ ಕೆಸಿಆರ್ ದಂಪತಿ ರಾಜಶ್ಯಾಮಲ ಯಾಗ ಪೂರ್ಣಾಹುತಿಯಲ್ಲಿ ಪಾಲ್ಗೊಂಡಿದ್ದರು. ಕೆಸಿಆರ್ ದಂಪತಿಗೆ ವೈದಿಕರು ಆಶೀರ್ವಾದ ಮಾಡಿದರು. ಇತ್ತೀಚೆಗಷ್ಟೇ ತೆಲಂಗಾಣ ರಾಷ್ಟ್ರ ಸಮಿತಿಯ ಹೆಸರನ್ನು ಭಾರತ ರಾಷ್ಟ್ರ ಸಮಿತಿ ಎಂದು ಬದಲಿಸಿ ದೇಶದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!